ಕರ್ತನೇ ನಿನ್ನಯ ಪಾದದಿ ನನಗೆ ನೆಮ್ಮದಿ

ಕನ್ನಡ

ಕರ್ತನೇ ನಿನ್ನಯ ಪಾದದಿ ನನಗೆ ನೆಮ್ಮದಿ ನೆಮ್ಮದಿಯೇ ಆಸಕ್ತಿಯಿಂದ ಹಾಡುವೆ ನಾ ಅನಂದ ಆನಂದವೇ ಆಶ್ರಯವೆ ಅತಿಶಯವೇ ಆರಾಧನೆ ಆರಾಧನೆ 1.ಯಜ್ಞದ ಕುರಿಮರಿ ಪಾಪವನ್ನೆಲ್ಲ ಸಂಪೂರ್ಣ ಹೊತ್ತವನೇ ಪರಿಶುದ್ದ ರಕ್ತ ನನಗಾಗಿಯೆ ಸ್ವಾಮಿ ಭಾಗ್ಯ ಸೌಭಾಗ್ಯವೇ ಪರಿಶುದ್ದನೇ ಪಾವನನೇ ಆರಾಧನೆ ಆರಾಧನೇ -2 2.ನಿನ್ನಯ ಕೃಪೆಯ ನೆನೆದು ನೆನೆದು ನಾನ್ನಾತ್ಮ ಚೈತನ್ಯವೇ ನಲ್ಲನು ನೀ ನನ್ ಪ್ರಿಯನು ನೀ ನನ್ನೇಸು ರಾಜ ನೀ ನನ್ ದೇವನೇ ನನ್ನ ಯೇಸುವೇ ಆರಾಧನೆ ಆರಾಧನೆ -2 3.ಎಷ್ಟೊಂದು ಕಷ್ಟವು ನನಗೆ ಬಂದರು ನಿನ್ನನ್ನು ಅಗಲೆನು ರಕ್ತವ ಸುರಿಸಿ ಸಾಕ್ಷಿಯಾಗಿರುವೆ ನಿಶ್ಚಯ ನಿಶ್ಚಯವೇ ರಕ್ಷಕನೇ ಯೇಸುದೇವಾ ಆರಾಧನೆ ಆರಾಧನೇ -2