ಕರುಣ ನಿಧಿಯೇ ಕರುಣಿಸು ಮುಂಜಾನೇ ವೇಳೆಯಲ್ಲಿ

ಕನ್ನಡ

ಕರುಣ ನಿಧಿಯೇ ಕರುಣಿಸು ಮುಂಜಾನೇ ವೇಳೆಯಲ್ಲಿ ಕರುಣಿಸು ಪ್ರಸನ್ನತೆಯಿಂದ ದಯೆತೋರಿಸು || 2 || || ಕರುಣ ನಿಧಿಯೇ || ನಿನ್ನ ಕೃಪೆಯೊಂದೆ ಸಾಕು ದಿನವೆಲ್ಲಾ ಬದುಕಲು ಯೇಸಯ್ಯಾ || 2 || ನಿನ್ನ ಮಮತೆಯೊಂದೇ ಸಾಕು ದಿನವೆಲ್ಲಾ ಸ್ತುತಿಸಲು ಯೇಸಯ್ಯಾ || 2 || || ಕರುಣ ನಿಧಿಯೇ || ನನ್ನ ಕೈಗಳ ಎತ್ತಿವೆ ಮೊಣಕಾಲು ಊರುವೆ ಯೇಸಯ್ಯಾ || 2 || ನಿನ್ನ ಪಾದವ ಬಿಡೆನು ಸದುತ್ತರ ನೀಡು ಯೇಸಯ್ಯಾ || 2 || || ಕರುಣ ನಿಧಿಯೇ || ಪೌಳಿಯ ಒಡಕಿನಲ್ಲಿ ನಿಂತು ದೇಶಕ್ಕಾಗಿ ಪ್ರಾರ್ಥಿಸುವೆ ಯೇಸಯ್ಯಾ || 2 || ಉಜ್ಜೀವನ ಮಳೆಯು ಸುರಿಸು ದೇಶವನ್ನು ರಕ್ಷಿಸಲು ಯೇಸಯ್ಯಾ || 2 || || ಕರುಣ ನಿಧಿಯೇ ||