ಕಲ್ವಾರಿನಾಥ ಹೊಗಳುವೇ ನಾನು,

ಕನ್ನಡ

ಕಲ್ವಾರಿನಾಥ ಹೊಗಳುವೇ ನಾನು, ಪ್ರೀತಿಯಿಂದ ಕೂಡಿ ಬಂದೆನು, ಶಿಲುಭೆನಾಥನ ಕಷ್ಟವ ನೋಡಿ, ಪ್ರೀತಿಯಿಂದ ನಾ ಹೇಳಲು ಬಂದೇ, ನೀ ನನ್ನನ್ನೂ ಬಾಳಿಸಲೇಂದೆ ಲೋಕ ಪಾಪವ ಹೊತ್ತನು. ಎಲ್ಲ ಪಾಪವ ನೀಗಲಿ ಎಂದೂ ತನ್ನ ಮಹಿಮೆಯ ಕೊಟ್ಟನು. ನಿನಗಾಗಿ ಸತ್ತನು, ನಿನಗಾಗಿ ಎದ್ದನು. ನಿನಗಾಗಿ ಇಂದು ಜೀವಿಸುವನು. ನಿನಗಾಗಿ ಬಾಳುವ ನಮ್ಮ ಯೇಸುವ ಹೃದಯದೀ ನಿನ್ನ ತೋರೆಯದಿರು. ಹಣನಗೆಯಲ್ಲ ನಿನಗೆ ನಿನ್ನ ಹೃದಯವನ್ನು ಕೇಳುವನು. ನಿನ್ನ ಹೃದಯವನ್ನು ಕೊಟ್ಟು ನೋಡು. ಜೀವ ಉನ್ನತವಾಗಿ ಮಾಡುವನು. ನೀನು ಬಾಳಲೆಂದಲೇ ತನ್ನ ಜೀವ ಕೊಟ್ಟರು. ನಿನ್ನನ್ನು ಸೇರಿಸಿಕೊಳ್ಳಲು ತನ್ನ ಮಹಿಮೆಯ ಬಿಟ್ಟರು… //2// ಶಿಲುಭೆಯ ಹೊತ್ತ ಯೇಸುನಾದನು ನಿನಗಾಗೆ ತಾನೇ ಅತ್ತನು. ಪಾಪವ ಅರಿಯದ ಪರಿಶುಧ್ಧನು ನಿನಗಾಗಿ ಜಡಿಯಲ್ಪಟ್ಟನು. ನಿನಗಾಗಿ ಕಷ್ಟವೂ, ನಿನಗಾಗಿ ಬಾಧೆಯೂ, ಯೇಸು ತನ್ನಲ್ಲಿ ತೆಗೆದುಕೊಂಡನು. ಎಷ್ಟೋಂದು ಪ್ರೀತಿ ಇರುವ ದೇವನಾ ನಿನ್ನ ಮನದಿಂದ ಮರೆಯದಿರು. ಪಾಪವ ಅರಿಯದ ಪರಿಶುಧ್ದನು ನಿನಗಾಗಿ ಜೀವ ಕೊಟ್ಟರು, ನಿನ್ನನ್ನು ಸೇರಿಸಿಕೊಳ್ಳಲು ತನ್ನ ಮಹಿಮೆಯ ಬಿಟ್ಟರು… //2// ನಿನ್ನ ಭಾರವ ನಾ ಹೊತ್ತುವೆನೆಂದು, ಹೇಳುವ ಯಾರನ್ನೂ ಕಂಡಿರುವೆಯಾ. ನಿನ್ನ ಭಾರವ ನಾ ಹೊರವೆನೆಂದು, ಹೇಳುವ ನನ್ನೇಸು. ತನ್ನ ಹಸ್ತದೀ ಚಿತ್ರೀಸಿದ ದೇವಾ, ನಿನ್ನ ಮನದಿಂದ ತೊರೆಯದಿರು. ಜೀವ ಕೊಟ್ಟ ಆ ದೇವನ ನೀ ಮರೆಯದಿರು, ಎಂದು ಮರೆಯದಿರು…