ಕವಿಯು ನೀನಾದಾಗ ಯೇಸು ಕರುಣೆಯ ನೀ ಬರೆದ ಹಾಡು

ಕನ್ನಡ

ಕವಿಯು ನೀನಾದಾಗ ಯೇಸು ಕರುಣೆಯ ನೀ ಬರೆದ ಹಾಡು ಪ್ರೀತಿಯು ನೀನಾದಾಗ ಒಲುಮೆ ನೀ ಕಡೆದ ಮೂರ್ತಿ ನೋಡು ಕವಿಯು ನೀನಾದಾಗ ಯೇಸು ಕರುಣೆಯ ನೀ ಬರೆದ ಹಾಡು 1.ಕಾಡಲ್ಲಿ ಮರವು ನಾ ಆಗಿರೆ ಚಂದದ ಗಂಧ ನೀ ತುಂಬಿದೆ – 2 ತ್ಯಾಗವೆಂಬ ಗಂಧ ಸೂಸಿ ಧನ್ಯನಾದೆ ನಿನ್ನಿಂದ – 2 2.ಮಳೆಯಿರದ ಮೇಘ ನಾ ಆಗಿರೆ ಮನದಲ್ಲಿ ಪ್ರೀತಿ ಮಳೆ ನೀಡಿದೆ – 2 ಧನ್ಯವಾಯ್ತು ಜೀವವಿಂದು ಪ್ರೇಮ ತುಂಬಿ ಬಂದಾಗ – 2