ಕಾಯುವ ಕರ್ತನು, ಯೇಸು ಇರಲು,

ಕನ್ನಡ

ಕಾಯುವ ಕರ್ತನು, ಯೇಸು ಇರಲು, ಕಣ್ಣೀರು ಏಕೆ ಮನವೆ, ಕಣ್ಣೀರು ಏಕೆ ಮಗನೆ, ಕಣ್ಣೀರು ಏಕೆ ಮಗಳೆ, ||ಕಾಯುವ|| ಇದುವರೆಗು ನಿನ್ನ ನಡೆಸಿದ ಕರ್ತನು, ಮುಂದೆಯು ನಡೆಸುವೆನು, ಎಬಿನೆಜರ್ ಆತನಲ್ಲವೆ, ಎಬಿನೆಜರ್ ಆತನಲ್ಲವೆ ||ಇದುವರೆಗು|| ||ಕಾಯುವ||, ಕಾಣುವ ಲೋಕ ನಮ್ಮದಲ್ಲ, ಕಾಣದ ಪರಲೋಕವೆ, ನಮ್ಮ ವಾಸ ಸ್ಥಳ (೨), ನಮ್ಮ ವಾಸ ಸ್ಥಳ ||ಕಾಯುವ||, ಲೋಕದ ಕಷ್ಟ ಬೇಗ ನೀಗುವುದು, ಮಹಿಮೆ ಹೊಂದುವೆವು, ಮರೆಯದಿರು ಮನವೆ, ಮರೆಯದಿವು ಮನವೆ (೨) ||ಕಾಯುವ||