ಕೃಪೆಯಿಂದಲೆ ನಿನ್ನ ಕೃಪೆಯಿಂದಲೆ

ಕನ್ನಡ

ಕೃಪೆಯಿಂದಲೆ ನಿನ್ನ ಕೃಪೆಯಿಂದಲೆ ನಾ ಬಾಳುವೆ ಯೇಸಯ್ಯಾ (2) ಜ್ಞಾನವು ಇಲ್ಲ ಬುದ್ಧಿಯು ಇಲ್ಲ ಅರ್ಹತೆ ಇಲ್ಲ ನನ್ನದ್ಯಾವುದು ಇಲ್ಲ (2) 1.ಕುಗ್ಗಿ ಹೋದ ನನ್ನನ್ನು ನಿನ್ನ ಕೃಪೆಯಿಂದ ಮೇಲಕೆತ್ತಿ ಬಂಡೆ ಮೇಲೆ ನಿಲ್ಲಿಸಿದಿಯೆ ತಪ್ಪಿ ಹೋದ ನನ್ನನ್ನು ನಿನ್ನ ಕೃಪೆಯಿಂದ ಹುಡುಕಿ ಒಳ್ಳೆ ದಾರಿಯಲ್ಲಿ ನಿಲ್ಲಿಸಿದಿಯೆ (2) ಕೃಪೆಯೆ ಕೃಪೆಯೆ – ನಿನ್ನ ಕೃಪೆಯೆ ನನ್ನನ್ನು ಮೇಲೆಕೆತ್ತಿದೆ (2) || ಕೃಪೆ || 2.ನಿರ್ಜೀವದ ಲೋಕದಲ್ಲಿ ನಿನ್ನ ಕೃಪೆಯಿಂದ ಜೀವವನ್ನು ಕೊಟ್ಟು ನನ್ನ ಬದುಕಿಸಿದಿಯೆ ಬರಗಾಲ ಬಂದಾಗ ನಿನ್ನ ಕೃಪೆಯಿಂದ ಫಲ ಬರಿತವಾದ ಬಾಳನ್ನು ನೀಡಿರುವೆ (2) ಕೃಪೆಯೆ ಕೃಪೆಯೆ – ನಿನ್ನ ಕೃಪೆಯೆ ನನ್ನನ್ನು ಕಾಪಾಡಿದೆ (2) || ಕೃಪೆ ||