ಕೈ ಬಿಡಬೇಡ ಅಪ್ಪಾ ತೊರೆಯಬೇಡ

ಕನ್ನಡ

ಕೈ ಬಿಡಬೇಡ ಅಪ್ಪಾ ತೊರೆಯಬೇಡ ನನ್ನನ್ನು ತೊರೆಯಬೇಡ || ವಾಗ್ಧಾನದ ದೇವರು ನೀ ನನ್ನನ್ನು ತೊರೆಯಬೇಡ || ಕೈಬಿಡಬೇಡ ಅಪ್ಪಾ ತೊರೆಯಬೇಡ ನನ್ನನ್ನು ತೊರೆಯಬೇಡ 1.ನೀ ನನ್ನನ್ನು ಪ್ರೀತಿಸಿದ್ದು ಶಾಶ್ವತ ಪ್ರೇಮದ ಅಲೆಗಳಿಂದ || ಧೀನನ ಸ್ಥಿತಿಯಲ್ಲಿ ಇದ್ದಂತ ನನ್ನನ್ನು ನೀ ಮೇಲಕ್ಕೆ ತಂದಿರುವೆ || ಕೈಬಿಡಬೇಡ 2.ನಿನ್ನ ಕೃಪೆಯೆ ಸಾಕು ನನಗೆ ನಾನು ಬದುಕುವಾ ದಿನವೆಲ್ಲಾ || ಶುಭವಾರ್ತೆ ಸಾರಲು ನನ್ನನ್ನು ಅಭಿಷೇಕಿಸು ನನ್ನನ್ನು ಅಭಿಷೇಕಿಸು || ಕೈಬಿಡಬೇಡ 3.ನಾನಾದರು ಕುಗ್ಗಿದವನು ದಿಕ್ಕಿಲ್ಲದವರಿಗೆ ಸಮಾನನು || ನಿನ್ನ ಕೃಪೆಯ ಹಸ್ತವು ನನ್ನ ಮೇಲೆ ಇರಿಸು ದೇವಾ || 4.ಯಾವಾಗಲೂ ನನ್ನ ಮುಂದೆ ನಿನ್ನನ್ನೇ ನಿಲ್ಲಿಸಿ ಕೊಂಡಿರುವೆ ನನ್ನಯ ಎದುರಿನಲ್ಲಿ ನೆರಳಿನ ಹಾಗೆ ನೀನು ನಿಂತಿರುವೇ ಯೇಸುದೇವಾ ||