ಚಿಯೋನೆ, ಚಿಯೋನೆ, ಚಿಯೋನೆ ಎಚ್ಚರಗೊಳ್ಳು, ಎಚ್ಚರಗೊಳ್ಳು

ಕನ್ನಡ

ಚಿಯೋನೆ, ಚಿಯೋನೆ, ಚಿಯೋನೆ ಎಚ್ಚರಗೊಳ್ಳು, ಎಚ್ಚರಗೊಳ್ಳು ನಿನ್ನ ಪ್ರತಾಪವನ್ನು ಇಂದು ದರಿಸಿಕೋ ಚಿಯೋನೆ… 1.ಕರ್ತನ ಅತ್ಯಧಿಕವಾದ ಶಕ್ತಿಯನ್ನು ಆಶ್ರಯಿಸಿ ಬಲಗೊಳ್ಳು ನೀ ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲು ನೀ ಕೆಡುಕನ ಅಗ್ನಿ ಬಾಣಗಳನ್ನೆಲ್ಲಾ ಅರಿಸಲು ಶಕ್ತಿನಾಗಿರು – 2 ಚಿಯೋನೆ… 2.ಸತ್ಯವೆಂಬ ನಾಡುಕಟ್ಟನ್ನು ಕಟ್ಟಿಕೊಂಡಿರೂ ನೀತಿ ಎಂಬ ವಜ್ರ ಕವಚವ ಧರಿಸಿಕೊಂಡಿರು ಸಿದ್ದ ಮನಸ್ಸೆಂಬ ಕೆರವನ್ನು ಮೆಟ್ಟಿ ಸುವಾರ್ತೆ ನೀ ಸಾರು – 2 ಚಿಯೋನೆ… 3.ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಂಡಿರು ರಕ್ಷಣೆ ಎಂಬ ಶಿರಸ್ತ್ರಾಣವನ್ನು ಇಟ್ಟು ಕೊಂಡಿರು ಪಾವಿತ್ರಾತ್ಮನು ಕೊಡುವ ದೇವವಾಕ್ಯವೆಂಬ ಕತ್ತಿ ಹಿಡಿದುಕೊಂಡಿರು – 2 ಚಿಯೋನೆ…