ಜಲರಾಶಿ ಹಾಯುವಾಗ ಜೊತೆಯಲ್ಲೇ ನೀನ್ ಇರುವೆ

ಕನ್ನಡ

ಜಲರಾಶಿ ಹಾಯುವಾಗ ಜೊತೆಯಲ್ಲೇ ನೀನ್ ಇರುವೆ ಅಗ್ನಿಯಲ್ಲಿ ನಡೆಯುವಾಗ ಹತ್ತರವೆ ನೀನ್ ಇರುವೆ ಮುಳುಗಿ ಹೋಗಲಾರೆ ನಾ ದಹಿಸಿಹೋಗಲಾರೆ ||2|| 1.ನನ್ನಲ್ಲಿ ಮಮತೆ ಇಟ್ಟು ನನಗಾಗಿ ರಕ್ತಚೆಲ್ಲಿ ||2|| ನನ್ ಪಾಪ ತೊಳೆದಿರುವೆ –ಇಂದು ಬಿಡುಗಡೆ ತಂದಿರುವೆ –ಯೇಸಯ್ಯಾ ಯೆಸಯ್ಯಾ 2.ನಿನ್ನ ದೃಷ್ಟೀಯಲ್ಲಿ ಅಮೂಲ್ಯನಾದೆನಾ||2|| ಗೌರವಕ್ಕೆ ಯೋಗ್ಯನು ನಾನೇ ಇಂದು ಹರುಷದಿ ನಲಿಯುವೆ–ಯೇಸಯ್ಯಾ ಯೆಸಯ್ಯಾ 3.ಮರುಭೂಮಿ ಯಾತ್ರೆಯಲ್ಲಿ ಮಾರ್ಗವ ತೋರಿಸಿದೆ ||2|| ನದಿಗಳ ಹರಿಸಿರುವೆ ದಿನ ನಲಿದು ಹಾಡುವೆನು –ಯೇಸಯ್ಯಾ ಯೆಸಯ್ಯಾ 4.ಹೆತ್ತತಾಯಿ ತನ್ನ ಮಗುವನ್ನು ||2|| ಮರೆತರೂ ನೀ ನ್ನ ಮರೆಯಲಾರೆ –ನಿನ್ನ ಅಂಗೈಯಲ್ಲೇ ಚಿತ್ರಿಸಿರುವೆ –ಯೇಸಯ್ಯಾ ಯೆಸಯ್ಯಾ