ಜೀವಿಸುವೇ ನಾನು ನಿನಗಾಗಿ

ಕನ್ನಡ

ಜೀವಿಸುವೇ ನಾನು ನಿನಗಾಗಿ ನನ್ನ ಜೀವಿತ ಕಾಲವೆಲ್ಲಾ ಕಷ್ಟವೂ ಇದ್ದರು ನಷ್ಟವೂ ಇದ್ದರು ವ್ಯಾಧಿಯು ತಾಕಿದರು ಹಿಂಸೆಯು ಕಾಡಿದರು 1.ಜೀವವು ಇಲ್ಲದ ಆ ಚಿಕ್ಕ ಮಗಳನ್ನು ಕೈ ಹಿಡಿದು ಜೀವವನ್ನು ಕೊಟ್ಟಿದಿಯೇ ಅವಳಿಗೆ ಆಹಾರ ನೀಡಲು ಹೇಳಿದಿಯೇ 2.ಜೀವವೂ ಇಲ್ಲದ ಆ ಯೌವನಸ್ಥ ನನ್ನು ಮಾತಿನಿಂದ ಜೀವವನ್ನು ಕೊಟ್ಟಿದಿಯೇ ತಾಯಿಗೆ ಅವನನ್ನು ಒಪ್ಪಿಸಿದಿಯೇ 3.ಜೀವವೂ ಇಲ್ಲದ ಆಲಾಜರನಿಗೆ ಕರೆದೆ ಜೀವವನ್ನು ಕೊಟ್ಟಿದಿಯೇ ಕಟ್ಟುಗಳ ಬಿಚ್ಚಿರಿ ಎಂದು ಹೇಳಿದೆಯೇ 4.ಜೀವವೂ ಇಲ್ಲದ ಈ ದಾಸನ ಕರೆದ ಪ್ರೀತಿಯಿಂದ ಆರಿಸಿ ಕೊಂಡಿದಿಯೇ ಜೀವವನ್ನು ಕೊಟ್ಟು ನಡೆಸಿದಿಯೇ