ತಂದೆ ಯೆಹೋವ ನೀ ತಾಯಿ ಯೇಸು ನೀ

ಕನ್ನಡ

ತಂದೆ ಯೆಹೋವ ನೀ ತಾಯಿ ಯೇಸು ನೀ ಪವಿತ್ರಾತ್ಮ ದೇವರು ನೀನೆ ನನ್ ಕಾಯುವ ಶಕ್ತನು ನೀವೇ 1.ತಂದೆ ನಿನ್ ಪ್ರೀತಿಯ ಲೆಕ್ಕಿಸದೆ ನಿನ್ನಿಂದ ದೂರಾದೆ ಲೋಕದ ಆಸೆಯ ಸುಳಿಯಲ್ಲಿ ಸಿಲುಕಿ ಗಾಯಿಯಿಲ್ಲದವನಾದೆನು ನಾ 2.ಅಪ್ಪ ಪರಲೋಕಕ್ಕೆ ವಿರೋಧವಾಗಿ ನಡೆದುಕೊಂಡೆ ನಿನ್ನ ಮಗನು ಎನಿಸಿಕೊಳ್ಳುವ ಬಾಧ್ಯತೆ ನನಗಿಲ್ಲಪ್ಪ ಆ ಬಾಧ್ಯತೆ ನನಗಿಲ್ಲಪ್ಪ 3.ತಂದೆ ನಿನ್ನ ಅಳುಗಳಲ್ಲಿ ನನ್ನನ್ನು ಆಳಾಗಿ ಇರಿಸು ನಿನ್ನ ಸೇವೆಯ ನಾ ಮಾಡಲು ನಿನ್ನ ರಾಜ್ಯವ ಕಟ್ಟಲು ಬಾಧ್ಯತೆ ದಯಪಾಲಿಸು