ಕನ್ನಡ
ದಾವೀದ ಊರಲ್ಲಿ ಲೋಕದ ರಕ್ಷಕ
ಬೆತಲಹೇಮಲ್ಲಿ ಯೇಸು ಜನಿಸಿದ… //3//
ರಾತ್ರಿಯ ವೇಳೆಯಲ್ಲಿ, ಗೋದಲಿಯ ಮಧ್ಯದಲ್ಲಿ,
ಮರಿಯಾಳ ಮಗನಾಗಿ, ಲೋಕದ ಕುರುಬನಾಗಿ,
ಶಾಪವ ನೀಗೀಸಲು, ಸೈತಾನ ತೊಲಗಿಸಲು ಬಿಡುಗಡೆಯ ಕೊಡಲು,
ಲೋಕವ ಜಯಿಸಲು.
ಬೆತಲಹೇಮಲ್ಲಿ ಯೇಸು ಜನಿಸಿದ… //2//
ಜೀವವುಳ್ಳ ದೇವನಾಗಿ, ಜೀವವನ್ನೇ ಕೊಡಲು ಬಂದ,
ಯೋಸೇಫ ಮರಿಯಾಳು ದೇವಾ ಚಿತ್ತಮಾಡಲು,
ದೇವರ ವಾಗ್ದಾನ ಬಾಳಲ್ಲಿ ಪೂರೈಯಿಸಲು,
ದು:ಖವೆಲ್ಲ ನೀಗಲೂ, ಸಂತೋಷ ನೀಡಲು.
ಬೆತಲಹೇಮಲ್ಲಿ ಯೇಸು ಜನಿಸಿದ… //2//
ದಾವೀದ ಊರಲ್ಲಿ ಲೋಕದ ರಕ್ಷಕ.
ಬೆತಲಹೇಮಲ್ಲಿ ಯೇಸು ಜನಿಸಿದ… //3//
ಸ್ತುತಿಸಿ ನಲಿದು ಹಾಡಲೂ, ಕುಣಿದು ನಾಟ್ಯವಾಡಲೂ,
ಬೆತಲಹೇಮಲ್ಲಿ ಯೇಸು ಜನಿಸಿದ… //2//
ಪಾಪ ತುಂಬಿದ ಲೋಕವನ್ನು ಬಿಡಿಸಲು,
ಧರೆಗೆ ಬಂದ ರಕ್ಷಕ,
ಅಂದು ಗೋದಲೆಯಲ್ಲಿ ಮುದ್ದು ಕಂದನಾಗಿ ಜನಿಸಿ,
ಕುರಿ ಕಾಯುವ ಕುರುಬ, ಶುಭವಾರ್ತೆ ಕೇಳಿದರೂ,
ರಕ್ಷಕನನ್ನು ಕಾಣಲೂ, ಹಾಡಿ ನಲಿದು ಹರಡಲೂ,
ದೀನ ಉಳ್ಳದ ರಾಜನೆಂದು, ಕಂಡು ನಲಿದು ಹಾಡಲೂ,
ಪಾಪ ಬಂಧನದಿಂದ ಬಿಡಿಸಿ, ಮೇಲಕ್ಕೆತ್ತಿಸಿ
ಸ್ತುತಿ ಹಾಡಿ ಹೊಗಳುವ ನಮ್ಮ ರಕ್ಷಕ.
ಬೆತಲಹೇಮಲ್ಲಿ ಯೇಸು ಜನಿಸಿದ… //2//
ದಾವೀದ ಊರಲ್ಲಿ ಲೋಕದ ರಕ್ಷಕ.
ಬೆತಲಹೇಮಲ್ಲಿ ಯೇಸು ಜನಿಸಿದ… //3//
ಸ್ತುತಿಸಿ ನಲಿದು ಹಾಡಲೂ, ಕುಣಿದು ನಾಟ್ಯವಾಡಲೂ,
ಬೆತಲಹೇಮಲ್ಲಿ ಯೇಸು ಜನಿಸಿದ… //3//