ದೇವರೇ… ನೀದೂರಾಗಬೇಡ

ಕನ್ನಡ

ದೇವರೇ… ನೀದೂರಾಗಬೇಡ ಯೇಸುವೆ…ನೀ ಮರೆಯಾಗಬೇಡ – 2 ಗರ್ವಿಷ್ಟರು ಅಹಂಕಾರಿಗಳು ನನ್ನ ಮೇಲೆ ಹೊಂಚುಹಾಕಿವರು – 2 ದೇವರೆ 1.ಯಾರಿಗೂ ಹೇಳಲಾಗದಷ್ಟು ಚಿಂತೆಯನ್ನು ಹೊತ್ತು ಕುಂತಿರುವೆ ಕಣ್ಣೀರ ಕಡಲಲ್ಲಿ ಮುಳುಗಿ ಕೈಗಳನ್ನು ಮೇಲೆ ಎತ್ತಿರುವೆ ನನ್ನವರು ಯಾರು ಇಲ್ಲ ಎಲ್ಲ ನೀವೆ ಅಯ್ಯ – 2 ಕರುಣಿಯ ಸಾಗರ ನೀನು ಕರುಣಿಯ ಸಾಗರ 2.ನನ್ನ ಬಗ್ಗೆ ಮಾತನಾಡದಿದ್ದರೆ ಅವರಿಗೆ ನಿದ್ದೆ ಬಾರದು ನನ್ನನ್ನು ಗೇಲಿ ಮಾಡದಿದ್ದರೆ ಅವರಿಗೆ ನೆಮ್ಮದಿ ಸಿಗದು ಅವನ ದೇವರು ಎಲ್ಲಿ – 2 ಎಂದು ಚುಚ್ಚುವ ಬಾಯಿಗಳ ಮುಚ್ಚು ಬಾರಯ್ಯ ದಯಾಸಾಗರ ನೀನು ದಯಾಸಾಗರ