ಕನ್ನಡ
ದೇವಾ ನಿನ್ನ ಕೃಪೆಯ ಅನುದಿನ ಹಾಡುವೆ
ನಿನ್ನಯ ಪ್ರೀತಿಯ ಲೋಕಕ್ಕೆ ಸಾರುವೇ (2)
1.ಪಾಪದ ದಿನಗಳಲ್ಲಿ ಶಾಪದ
ನೆರಳಿನಲ್ಲಿ ಬಳಲಿದ ನನ್ನ ಕರೆದು
ತಾಯಿಯಂತೆ ಸಲಹಿದೆ (2)
ಒಳ್ಳೆಯ ಕುರುಬ ನೀನು ನಿನ್ನಗಲಿ ಬಾಳೆನು – ದೇವಾ
2.ವಾಕ್ಯದ ಬೆಳಕಿನಲ್ಲಿ ನೀಗಿಸಿ ಇರುಳುನೆಲ್ಲ
ಬಾಳಿನ ದಿನಗಳೆಲ್ಲಾ ನಿನ್ನ ಕೃಪೆಯ ತುಂಬಿನಡೆಸು
ನಿನ್ನಯ ವಾಕ್ಯ ಧ್ಯಾನ ನಿತ್ಯ ಜೀವ ಸಾಧನ
ನಿನ್ನಾಯ ಸನ್ನಿಧಾನ ಕೃಪೆಯ ಸಿಂಚನ – ದೇವಾ