ದೇವಾ ನಿನ್ನ ದಯೆ ಎಷ್ಟೋ ದೊಡ್ಡದು

ಕನ್ನಡ

ದೇವಾ ನಿನ್ನ ದಯೆ ಎಷ್ಟೋ ದೊಡ್ಡದು ರಾಜ ನಿನ್ನ ಪ್ರೇಮ ಅಪಾರವಾದುದು – 2 – ಒಂದು ಕ್ಷಣ ನನ್ನನ್ನು ಮರೆಯದಂತೆ ತಂದೆ ತಾಯಿಗಿಂತ ಹೆಚ್ಚು ಪ್ರೀತಿ ಮಾಡ್ವವರೇ ಹಲ್ಲೆಲೂಯಾ ಹಲ್ಲೆಲೂಯಾ ಆರಾಧನೆ ಕರ್ತನಿಗೆ ಹಲ್ಲೆಲೂಯಾ ಹಲ್ಲೆಲೂಯಾ ಆರಾಧನೆ ರಾಜನಿಗೆ 1.ನನ್ನ ಸಂತತಿಯು ನಿನ್ನ ಪಾದಕ್ಕೆ ಮುದ್ದಿಸಲಿ ನಿನ್ನ ನಾಮವ ಸದಾ ಆರಾಧಿಸಲಿ ||ಹಲ್ಲೆಲೂಯಾ ಹಲ್ಲೆಲೂಯಾ|| 2.ಪ್ರಭು ನಿನ್ನ ವಚನ ನನ್ ಕಾಲಿಗೆ ದೀಪವು ಅದುವೇ ನನ್ನ ಬಾಳಿನ ಬೆಳಕು ಆಗಿದೆ ||ಹಲ್ಲೆಲೂಯಾ ಹಲ್ಲೆಲೂಯಾ|| 3.ಬೇಟೆಗಾರನ ಬಲೆಯಿಂದ ತಪ್ಪಿಸಿದಾತನೇ ಮರಣಕರ ವ್ಯಾದಿಗಳಿಂದ ಬಿಡಿಸಿದಾತನೇ ||ದೇವಾ ನಿನ್ನ ದಯೆ||