ದೇವಾಧಿದೇವನಿಗೆ ಸ್ತೋತ್ರ ಸ್ತೋತ್ರ

ಕನ್ನಡ

ದೇವಾಧಿದೇವನಿಗೆ ಸ್ತೋತ್ರ ಸ್ತೋತ್ರ ರಾಜಾಧಿರಾಜನಿಗೆ ಸ್ತುತಿ ಮಹಿಮೆ ಒಳ್ಳೆಯ ದೇವರೇ ಪ್ರೀತಿಸುವ ದೇವರೆ ಜೀವವುಳ್ಳ ದಿನವೆಲ್ಲಾ ಸ್ತುತಿ ಮಹಿಮೆ ಹಲ್ಲೆಲೂಯ…ಆರಾಧನೆ… 1.ಶತ್ರುವಿನ ಸೈನ್ಯಗಳು ನನ್ನ ಮುತ್ತಿ ಕೊಳ್ಳಲು ಯೆಹೋವ ನಿಷಿಯೇ ಜಯ ನೀಡಿರುವೆ / ತಂದಿರುವೆ ರೋಗಗಳು ನನ್ನನ್ನು ಬೆನ್ನತ್ತಿ ಕಾಡಿದ ರೂ ಯೆಹೋವ ರಾಫ ಆರೋಗ್ಯ ನೀಡಿರುವೆ / ತಂದಿರುವೆ 2.ಇದುವರೆಗೂ ನನಗೆ ಸಹಾಯವ ಮಾಡಿರುವೆ ಎಬಿನೇಜರೇ ನಿಮಗೆ ಕೋಟಿ ಸ್ತೋತ್ರವು ದುಃಖ ಚಿಂತನಾಗಿ ಸಾಗುವ ಸಮಯದಲ್ಲಿ ಯೆಹೋವ ಯೀರೆ ಆಸೆ ತೋರಿಸಿದೆ 3.ಮರುಭೂಮಿ ಯಾತ್ರೆಯಲ್ಲಿ ನಾ ಅಲೆಯುತ್ತಿರಲು ಯೆಹೋವ ಎಲೋಹಿ ನನ್ನ ನೋಡಿದಿ ಕಣ್ಣೀರೆಲ್ಲಾ ಒರೆಸಿ ಸಮಾಧಾನ ತಂದಿರುವೆ ಯೆಹೋವ ಶಾಲೋಮ್ ನಿಮಗೆ ಕೃತಜ್ಞತೆ