ಕನ್ನಡ
ನಂಬಿಕೆಯಿಂದಲೇ ಮುನ್ನುಗ್ಗುವೆ ನಂಬಿಕೆಯಿಂದಲೇ ಎಲ್ಲಾ ಮಾಡುವೆ
ಅಸಾಧ್ಯವಾಗಿ ಏನೂ ಇಲ್ಲಾ ನನ್ನ ಮುಂದೆ ಇನ್ನು ಜಯ ನನಗೆ
ನಾನು ಹಿಂಜಾರುದಿಲ್ಲ ನಂಬಿಕೆ ಹೆಜ್ಜೆಗಳು ಮುಂದಕ್ಕೆ ಮುಂದಕ್ಕೆ
ಯಾರೆಲ್ಲಾ ತಡೆದರೂ ಏನೆಲ್ಲಾ ನೆನೆದರೂ ಹಿಂಜಾರುವುದಿಲ್ಲಾ
ಅಧಿಕಾರದಿಂದ ಆಜ್ಞಾಪಿಸುವೆ ನಾ ಪ್ರತಿಕೂಲವೂ ದೂರವಾಯಿತು
ಅಸಾಧ್ಯವಾಗಿ ಏನು ಇಲ್ಲಾ ನನ್ನ ಮುಂದೆ ಇನ್ನು ಜಯಾ ನನಗೆ
1.ಅಪಾಯವಿದೆಯೆಂದು ಭಯವಿಲ್ಲ ಸೋಲಾಗುತ್ತದೆಂದು ಭಯವಿಲ್ಲಾ
ಶತ್ರು ಜಯಾ ಹೊಂದಿ ಭವಿಷ್ಯಹಾಳಾಗ್ವದೆಂದು ಇನ್ನು ಮುಂದೆ ಭಯಪಡೆನು
2.ರೋಗಕ್ಕೂ ಇನ್ನು ಶಾಪಕ್ಕೂ ಪಾಪಕ್ಕೂ ನಾನು ಆಧೀನನಲ್ಲ
ಪಾಪ ಬಂಧನ ಮತ್ತು ಸೈತಾನಶಕ್ತಿ ಮೇಲೆ ಜಯಾ ನನಗಿದೆ
3.ವ್ಯಾಕುಲ ಚಿಂತೆಯಿಂದ ಇರಲಾರೆ ಚಿಂತಾಭಾರದಿಂದ ಇರಲಾರೆ
ತಕ್ಕ ಸಮಯದಲ್ಲಿ ಎಲ್ಲಾ ಒದಗಿಸುವ ಎಂದೆಂದು ಕೈ ಬಿಡೆನು