ನಿನ್ ಪ್ರಸನ್ನತೆ ಬಿಟ್ಟು ನಾ ಹೋಗದಂತೆ

ಕನ್ನಡ

ನಿನ್ ಪ್ರಸನ್ನತೆ ಬಿಟ್ಟು ನಾ ಹೋಗದಂತೆ ಅಭಿಷೇಕದಿಂದ ನನ್ನ ತುಂಬಿಸಿದೆ ನೀ ಬಲವಿಲ್ಲದಿರುವಾಗ ಸೋತು ಹೋದ ಸಮಯದಲ್ಲಿ ಪರಿಶುದ್ಧ ಆತ್ಮದಿಂದ ನನಗೆ ಬಲವನ್ನು ನೀಡಿದೆ ನೀ ಆರಾಧನೆ ಆರಾಧನೆ ಆರಾಧನೆ ಆರಾಧನೆ 1.ನೀನಿಲ್ಲದೇ ನಾ ಅಲೆಯುತ್ತಿದ್ದೆನು ನೀನಿಲ್ಲದೇ ನಾ ಅಳುತ್ತಿದ್ದೆನು ನನ್ ಬಾಳಲಿ ನೀನು ಬೆಳಗಾಗಿ ಬಂದೆ ಸಂತೋಷದಿಂದ ನನ್ನ ತುಂಬಿಸಿದೆ ನೀ ಆರಾಧನೆ ಆರಾಧನೆ ಆರಾಧನೆ ಆರಾಧನೆ – ನಿನ್ 2.ಭಯವೇಯಿಲ್ಲ ನೀ ಜೊತೆ ಇರಲು ನಿರಾಸೆಯಿಲ್ಲ ನೀ ನನ್ನ ದೇವರು ನನ್ ಬಾಳಲಿ ಇನ್ನು ಎಂದೆಂದಿಗೂ ಸೋಲೆಯಿಲ್ಲ ಎಂದು ಜಯವೇ ಜಯ ಆರಾಧನೆ ಆರಾಧನೆ ಆರಾಧನೆ ಆರಾಧನೆ – ನಿನ್