ನಿನ್ ಭೂಯಾತ್ರೆಯಾ ಚಿಂತೆಯನ್ನು

ಕನ್ನಡ

ನಿನ್ ಭೂಯಾತ್ರೆಯಾ ಚಿಂತೆಯನ್ನು ಕರ್ತಗೊಪ್ಪಿಸಿ ನಿಶ್ಚಿಂತನಾಗಿರು || || ಭಯವು ಏತಕ್ಕೆ?ಸಂದೇಹವೇತಕ್ಕೆ ? ಕರ್ತನಿರುವಲ್ಲಿ ಚಿಂತೆಯೇತಕ್ಕೆ || 1.ಯೇಸುವಿನೋಡನೆ ಮುಂದೇ ಸಾಗು ನೀ ಸಂದೇಹ ಪಡದೆ ಆತನ ನಂಬು ನೀ || ಬೆಟ್ಟದಂತೆ ಕಷ್ಟ ಬಂದರು ಯೇಸು ಇರುವನು ನೀ ಯೇಸುವ ನೋಡು || ನಿನ್ ಭೂಯಾ|| 2.ನಿನಗಾದ ಸ್ಥಿತಿಗೆ ಬೆರಗಾಗುತ್ತಿದ್ದರೂ ಕಣ್ಣೀರ ಕಾಲುವೆ ನೀ ದಾಟುತ್ತಿದ್ದರೂ || ನಿನ್ನ ಮೇಲೆ ಮಮತೆ ಇಟ್ಟ ಯೇಸು ಇರುವನು ನೀ ಯೇಸುವ ನೋಡು || ನಿನ್ ಭೂಯಾ|| 3.ಕಾರ್ಗತ್ತಲು ನಿನ್ನನ್ನು ಕವಿದುಕೊಂಡಿರಲು ದಿಕ್ಕು ಕಾಣದೆ ದೆಸೆಗೆಟ್ಟಿರಲು ಜ್ಯೋತಿಯಾಗಿ ನಿನ್ನಲ್ಲಿರುವ ಯೇಸುವ ನೋಡು ನೀ ಯೇಸುವ ನೋಡು || ನಿನ್ ಭೂಯಾ|| 4.ನಿನ್ನಯ ಹಿತಕ್ಕೆ ಎಲ್ಲವು ಅಗ್ವದು ಯೇಸುವಿನ್ ರೂಪಕ್ಕೆ ರೂಪಿತನಾಗಲು ಶಿಲ್ಪಿಯಾದ ದೇವರು ರೂಪಿಸುತ್ತಿರುವನು ಈತನ ಪ್ರೀತಿಸು || ನಿನ್ ಭೂಯಾ||