ನನ್ ಹತ್ತಿರವಿರು ಓ ಯೇಸುವೆ

ಕನ್ನಡ

ನನ್ ಹತ್ತಿರವಿರು ಓ ಯೇಸುವೆ ನಾ ನಿನ್ನನ್ನು ಬಿಟ್ಟು ಬಾಳಲಾರೆನು (೨) ಕತ್ತಲಿನ ಸಮಯದಿ ಬೆಳಕಾಗಿರು, ಮರಣದ ಜೀವವಾಗಿರು (೨) ||ನನ್ ಹತ್ತಿರವಿರು|| ಕಣ್ಣೀರಿನ ಸಮಯದಿ ತಾಯಿಯಾಗಿರು, ಸಾಲದ ಸಮಯದಿ ತಂದೆಯಾಗಿರು (೨) ||ನನ್ ಹತ್ತಿರವಿರು|| ನಿನ್ ವಾಕ್ಯ ಓದುವ ಸಮಯದಿ ಗುರುವಾಗಿರು, ಪ್ರಾರ್ಥಿಸುವ ಸಮಯದಿ ದೇವರಾಗಿರು (೨) ||ನನ್ ಹತ್ತಿರವಿರು||