ನನಗಾಗಿ ಪ್ರಾಣವ ಕೊಟ್ಟವನೆ ನನಗಾಗಿ ಮರಣವ

ಕನ್ನಡ

ನನಗಾಗಿ ಪ್ರಾಣವ ಕೊಟ್ಟವನೆ ನನಗಾಗಿ ಮರಣವ ಗೆದ್ದವನೆ ನನ್ನನ್ನು ನಡೆಸಲು ಬಂದವನೆ ನನ್ನನು ಸಂಧಿಸಲು ಬರುವವನೆ ಯೇಸು ನನಗೆ ನನಗೆ ಸಾಕು ನನಗೆ ನನಗೆ ಎಲ್ಲಾ ಕಾಲದೊಳ್ ನನ್ನೊಂದಿಗಿರುವ ಯೇಸು ಸಾಕೆನಗೆ 1.ಸೈತಾನ ಶೋಧನೆ ಹೆಚ್ಚಿದರೂ ನಿರಾಸೆ ಹೊಂದದೆ ಮುಂದೆ ಹೋಗಲು ಲೋಕದ ಆಸೆಯು ಎದ್ದು ನಿಂತರೂ ಜಯವನ್ನು ಹೊಂದುತ್ತ ಮುಂದೆ ಹೋಗಲು || ಯೇಸು ನನಗೆ|| 2.ಮನುಷ್ಯರೆಲ್ಲರೂ ಕೈಬಿಟ್ಟರೂ ಶರೀರ ನಶಿಸಿ ಹೋಗುತ್ತೀದ್ದರೂ ಐಶ್ವರ್ಯವೆಲ್ಲ ಅಳಿದೋದರೂ ಯೋಗ್ಯತೆ ಇಲ್ಲವೆಂದು ತಳ್ಳಿ ಬಿಟ್ಟರೂ ||ಯೇಸು ನನಗೆ || 3.ಹಸಿರು ಹುಲ್ಲಿನ ಸ್ಥಳದಲ್ಲೇ ನನ್ನನ್ನು ಯೇಸು ನಡೆಸುವನು ನೀರಿನ ಬಳಿಗೆ ನಡೆಸುವನು ಆತ್ಮನ ಬಲದಿಂದ ನಡೆಸುವನು || ಯೇಸು ನನಗೆ||