ನನಗಾಗಿ ಯುದ್ಧವ ಮಾಡುವ ಕರ್ತನು

ಕನ್ನಡ

ನನಗಾಗಿ ಯುದ್ಧವ ಮಾಡುವ ಕರ್ತನು ನನ್ ಪಕ್ಷ ಇರುವನು ಸೈನ್ಯಗಳ ಕರ್ತನು ಇಮ್ಮಾನುವೇಲನು ನನ್ ಜೊತೆ ಇರುವನು ಸೋಲಿಲ್ಲ ನನಗೆ ಸೋಲಿಲ್ಲ ಯುದ್ಧವು ಕರ್ತನದೆ ಭಯವಿಲ್ಲ ನನಗೆ ( ಯಾವ ) ಭಯವು ಇಲ್ಲಾ ಯುದ್ಧವು ಕರ್ತನದೆ || ನನಗಾಗಿ || ಕೆಂಪು ಸಮುದ್ರವು ಎದುರಾದರು ಪರೋಹನ ಸೈನ್ಯೆಯೇ ಹಿಂದಟ್ಟಿದರು ಯೇರಿಕೋ ಗೋಡೆಯೆ ಅಡ್ಡ ನಿಂತರು ನನ್ ಕರ್ತ ನನ್ ಮುಂದೆ ಸಾಗುವನು || ತಡೆಯ ಮುರಿದು ಶತ್ರುವ ಕೆಡವಿ ಮಾರ್ಗ ಮಾಡುವನು || ಸೋಲಿಲ್ಲ || ನನಗೆ ವಿರುದ್ಧವಾದ ಆಯುಧಗಳು ಮಂತ್ರತಂತ್ರಗಳು ಪಲಿಸೋದಿಲ್ಲಾ ಸೈತಾನ ತಲೆಯನ್ನು ಜಜ್ಜಿದಾತನು ನನ್ನೊಳಗೆ ವಾಸ ಮಾಡುತ್ತಿರುವನು || ಯೇಸುವಿನ್ ರಕ್ತದಿ ಯೇಸುವಿನ್ ನಾಮದಿ ಜಯವು ಜಯ ನನಗೆ || ಸೋಲಿಲ್ಲ ||