ಕನ್ನಡ
ನನ್ನ ಆದಿಯು ನೀನೆ ದೇವಾ
ನನ್ನ ಅಂತ್ಯವೂ ನೀನೆ ಯೇಸು
ಯಾವಾಗಲೂ ನಿನ್ನನ್ನು ಸ್ತುತಿ ಮಾಡುವೆ
ಕಾಣ್ಣೀರಿಂದ ಮೊರೆ ಇಡುವೆ
1.ನನ್ನ ವಿಷಯದಲ್ಲಿ ನನ್ನ ನರಯವರು
ನನ್ನನ್ನು ನಿಂದಿಸುತ್ತರೆ
ನಾನು ಹೋಗುವ ದಾರಿಯಲ್ಲಿ ಕಂಡು
ನನ್ನನ್ನು ಓರೆಯಾಗಿ ಹೋಗುತ್ತಾರೆ
ನೀನಾದರು ನನ್ನ ಸ್ಥಿರಪಡಿಸು
ನನ್ನನ್ನು ತೊರೆಯದಿರು
2.ನಾನು ಸತ್ತವನಂತೆ ಯಾರ
ಜ್ಞಾಪಕಕ್ಕೂ ಬರದವನಾಗಿರುವೆ
ಈ ಲೋಕದ ಲೆಕ್ಕದಲ್ಲಿ ಇಲ್ಲದಿದ್ದರೂ
ಪರಲೋಕದ ಲೆಕ್ಕದಲ್ಲಿರುವೆ
ನಾನಾದರೂ ಯೆಸಯ್ಯಾ ನಿನ್ನಲ್ಲೇ
ಭರವಸೆ ಇಟ್ಟೀದ್ದೆನೆ.
3.ಕಷ್ಟ ಕಾಲದಲ್ಲಿ ನಿನ್ನ ಮೊರೆಯಿಡುವೆ
ನನ್ನನ್ನು ವಿಮೋಚಿಸಿದೆ
ಗುಡುಗುವ ಮೋಡದಲ್ಲಿ ನ್ನಿನಿದ್ದು
ಸದ್ದುತ್ತರ ನೀಡಿರುವೆ
ನಿನ್ನ ದರುಶನ ಕೋರುವರೆಲ್ಲಾರು
ನಿನ್ನಲ್ಲಿ ಅನಂದಿಸಲಿ / ಉಲ್ಲಾಸಿಲಿ