ನಿನ್ನ ಆರಾಧಿಸುವೆ ಯೇಸು ಯೇಸು

ಕನ್ನಡ

ನಿನ್ನ ಆರಾಧಿಸುವೆ ಯೇಸು ಯೇಸು ನಿನ್ನ ಪ್ರೀತಿಸುವೆ ಯೇಸು ಯೇಸು||2|| ನಿನ್ನನ್ನಲ್ಲದೇ ನಾ ಯಾರನ್ ಪ್ರೀತಿಸಲಿ ನಿನ್ನನ್ನಲ್ಲದೇ ನಾ ಯಾರನ್ ನಂಬಲಿ||2|| ನಿನ್ನನ್ನಲ್ಲದೇ ನಾ ಯಾರನ್ ಆರಾಧಿಸಲಿ ನಿನ್ನನ್ನಲ್ಲದೇ ನಾ ಯಾರನ್ ಹಿಂಬಾಲಿಸಲಿ||2|| 1.ಸ್ತೋತ್ರದ ಬಲಿಗಳ ಅರ್ಪಿಸುತ್ತಾ ಸ್ತುತಿ ಘನ ಮಹಿಮೆಯ ಸಲ್ಲಿಸುವೆ||2|| ಯಜ್ಞ ಹೋಮ ನಿನಗಿಷ್ಟ ಇಲ್ಲ ತಗ್ಗಿದ ಮನಸ್ಸು ಜಜ್ಜಿದ ಹೃದಯ ನಿನಗಿಷ್ಟವಾದ ಯಜ್ಞವು||2|| 2.ಆತುರದಿಂದ ಹುಡುಕಿ ನಿನ್ನ ಬಳಿಗೆ ಬಂದಿರುವೆ ಆಶೀರ್ವದಿಸದೇ ಹೋದರೆ ನಿನ್ನ ಬಿಡಲಾರೆ ||2|| ಕರುಣಿಸಿ ಮಹಿಮೆ ತೋರಿಸಯ್ಯ ಧನ ಘನತೆ ಶ್ರೇಷ್ಠ ಸಂಪತ್ತು ಸದಾ ನಿನ್ನಲ್ಲಿರುವುದು||2||