ನಿನ್ನ ಎಲುಬಿನಿಂದ ಬಂದನಾರಿ

ಕನ್ನಡ

ನಿನ್ನ ಎಲುಬಿನಿಂದ ಬಂದನಾರಿ ಇವಳೇ ನಿನಗೆ ಸರಿ ಜೋಡಿ ನಿನ್ನ ಶರೀರಕೆ ತಲೆ ಯಾದವನು ನಿನ್ನ ಬಾಳಿಗೆ ಜೊತೆ ಎಂದೆಂದೂ ನೋಡಿಕೊ ನೋಡಿಕೊ ನಿನ್ನ ಕಣ್ಣಿನ ಹಾಗೆಯೇ 2 ನೋಡಿಕೊ ನೋಡಿಕೊ ನಿನ್ನ ಸ್ವಂತ ಶರೀರದಂತೆ – 2 1.ಒಂಟಿಯಾಗಿ ಇರುವು ಸರಿ ಇಲ್ಲವೆಂದು ನಿನ್ನ ಬಾಳನ್ನು ನಿನ್ನ ಮನೆಯನ್ನು ಬೆಳಗುವ ಸತಿಯು ಇವಳೇ ಕಟ್ಟುವ ಸತಿಯು ಇವಳೇ – ನೋಡಿಕೊ 2.ಕಹಿಯಲ್ಲಿ ಸಿಹಿಯಲ್ಲಿ ಜೊತೆಯಾಗಿ ಬಾಳಿ ನೀವು ಇದು ದೇವರ ಕಾರ್ಯ ಇದನ್ನು ಮರೆಯ ಬೇಡಿರಿ ಮದುವೆ ದೇವರ ನಿಯಮವು – ನೋಡಿಕೊ 3.ದೇವರು ಕೂಡಿಸಿದ ಜೋಡಿಗಳು ನೀವು ಯಾವ ಮನುಷ್ಯನು ಅಗಳಿಸಲಾಗದು ಮದುವೆ ಮಾನ್ಯವಾದದು – ನೋಡಿಕೊ