ನಿನ್ನ ಏನೆಂದು ವರ್ಣಿಸಲಿ ಪ್ರಭು ಪ್ರಭು

ಕನ್ನಡ

ನಿನ್ನ ಏನೆಂದು ವರ್ಣಿಸಲಿ ಪ್ರಭು ಪ್ರಭು ಯೇಸಯ್ಯ …………….. ಯೇಸಯ್ಯ ನಿನ್ನ ಹೇಗೆ ನಾ ಸ್ತುತಿ ಮಾಡಲಿ ಪ್ರಭು ಪ್ರಭು ಯೇಸಯ್ಯ…………………………. ಯೇಸಯ್ಯ 1.ಹೆತ್ತ ತಾಯಿ ನನ್ನ ಮರೆತು ಹೋದರು ಯೇಸು ನೀ ಮರೆಯಲಿಲ್ಲ||2|| ಯೇಸಯ್ಯ …… ನೀನೆಷ್ಟೋ ಸುಂದರನು ಯೇಸಯ್ಯ …… ನೀನೆಷ್ಟೋ ಮನೋಹರನು ನೀ ನನ್ನ ಪ್ರಾಣಪ್ರಿಯನು||2|| 2.ಯೇಸು ನೀತಿವಂತರನ್ನು ಹುಡುಕಿ ಬರಲಿಲ್ಲ ಪಾಪಿಯಾದ ನನ್ನ ಪ್ರೀತೀಸಿ ಬಂದೆ|| ಯೇಸಯ್ಯ……… ನೀನೆಷ್ಟೋ ಉನ್ನತನು ಯೇಸಯ್ಯ……… ನೀನೆಷ್ಟೋ ಪರಿಶುದ್ಧನು ನೀ ನನ್ನ ಪರಿಹಾರಕನು||2|| 3.ಯೇಸು ಈ ಲೋಕದ ಜ್ಞಾನಿಗಳನ್ನು ಕರೆಯಲಿಲ್ಲ ಬುದ್ದಿ ಹಿನನಾದ ನನ್ನನ್ನು ಕರೆದಿರುವೆ||2|| ಯೇಸಯ್ಯ……… ನೀ ನನ್ನ ಉಸಿರಾಟವು ಯೇಸಯ್ಯ……… ನೀ ನನ್ನ ಸರ್ವಸ್ವವು ನೀ ನನ್ನ ಸಂಗಡಿಗನು||2||