ನನ್ನ ಕಾಯ್ವವ ತುಂಬಾ ಒಳ್ಳೆಯವ

ಕನ್ನಡ

ನನ್ನ ಕಾಯ್ವವ ತುಂಬಾ ಒಳ್ಳೆಯವ ನನ್ನ ಕಾಯ್ವವ ಸರ್ವಶಕ್ತನು ನನ್ನ ಕಾಯ್ವವ ನಿದ್ರೆಯ ಮಾಡನು ನನ್ನ ಕಾಯ್ವವ ಬಿಡನು ಕೈಯನು ನನ್ನ ಕಾಯ್ವವ ಎಂದಿಗೂ ಮರೆಯನು || ಕಾದವನು ಕಾಯುವನು ಕರುಣೆಯಿಂದ ಕಾದವನು ಕಾಯುವನು ಪ್ರೀತಿಯಿಂದ || ನನ್ನ 1 ) ದಾರಿ ಕಾಣದೆ ಊರೆಲ್ಲಾ ಅಲೆದೆ ದಾರಿಯ ತೋರಿ ಬಿಡಿಸಿ ಕಾದಿರುವೆ || ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು || ನನ್ನ ನಡೆಸೋ ಕುರುಬ ನೀನೇ || 2 ) ಪಾಪ ಶಾಪದಿ ಸಿಲುಕಿದ ನನ್ನ ನಿನ್ನ ರಕ್ತ ಸುರಿಸಿ ಬಿಡಿಸಿ ಕಾದಿರುವೆ || ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು || ರಕ್ಷಕ ಯೇಸು ನೀನೇ ನನ್ನ ರಕ್ಷಕ ಯೇಸು ನೀನೇ 3 ) ಸೌಖ್ಯವಿಲ್ಲದೆ ವೇಧನೆ ಪಟ್ಟೆ ವಾಕ್ಯವ ಕಳಿಸಿ ಸೌಖ್ಯವ ನೀಡಿದೆ || ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು || ಗುಣಪಡಿಸುವ ದೇವನು ನೀನೇ 4 ) ಬಡತನದಲ್ಲಿ ಇದ್ದ ನನ್ನನು ಸಿರಿವಂತನಾಗಿ ಮಾರ್ಪಡಿಸಿದೆ || ನಿನ್ನ ಪ್ರೀತಿ ದೊಡ್ಡದು ನಿನ್ನ ಕೃಪೆಯು ದೊಡ್ಡದು || ಐಶ್ವರ್ಯದಾಯಕ ನೀನೇ ನನ್ನ ಐಶ್ವರ್ಯದಾಯಕ ನೀನೇ || ನನ್ನ