ನನ್ನ ದೇವನಲ್ಲಿ ನನ್ನ ದೇವನಲ್ಲಿ

ಕನ್ನಡ

ನನ್ನ ದೇವನಲ್ಲಿ ನನ್ನ ದೇವನಲ್ಲಿ ನಿಶ್ಚಯದಿ ಅನುಗ್ರಹ ನಾನು ಹೊಂದುವೆ ನಿನ್ನ ವಾಕ್ಯದಂತೆ ನಾನು ನಡೆದು ನಿನ್ನ ದಾರಿಯಲ್ಲೇ ನಾನು ನಡೆವೆ 1 ) ದೇಶಕ್ಕೆ ನಾನು ಅನುಗ್ರಹವೂ ನೌಕರಿಯು ನನಗನುಗ್ರಹವೂ ನನ್ನ ಗೃಹದಾಹಾರಕೊರತೆ ಇಲ್ಲ ಇಚ್ಚೆಗಳು ಒಂದೂತಪ್ಪಿಹೋಗಿಲ್ಲ || 2 ) ನನ್ನ ಎದಿರು ಶತ್ರುಗಳೆಲ್ಲಾ ಚದುರಿ ಹೋಗುವರು ನನ್ನ ಕರ್ತನಿಂದಲೇ || ನನ್ನ ಆರೋಗ್ಯ ದೇವದಾನವದು ನನ್ನ ಶರೀರವು ಅದು ದೇವ ಕೃಪೆಯು || 3 ) ಜೀವಿತದಿ ಒಂದಾಗಿ ನನ್ನ ಮಕ್ಕಳು ನನ್ನ ಸಂಪತ್ತು ಅದು ಹರಸಪಡಲಿ || ನನ್ನ ಒಳಿತಿಗಾಗಿ ಕರ್ತ ಸಮೃದ್ಧಿ ತಂದ ನನ್ನ ಪರಿಶುದ್ಧ ಜನರಾಗಿ ಮಾಡಿದ || 4 ) ಸಾಲ ಬಯಸಲು ನನಗೆ ಅವಶ್ಯವಿಲ್ಲ ಸಾಲ ಕೊಡಲು ಕರ್ತ ಸಮೃದ್ಧಿ ತಂದ || ಬಯಸಿದ್ದೆಲ್ಲವ ನಾನು ಹೊಂದುವೆನು ಉನ್ನತದಿ ಮಾನಿಸಿ ನನ್ನ ಕಾಯುವಾ ||