ಕನ್ನಡ
ನನ್ನ ದೇವರೆ ನೀನೆ ನನ್ನಾಶ್ರಯಗಿರಿಯು ನನ್ನ ಪ್ರಾಣದಾ ಆಧಾರವು ನನ್ನ ರಕ್ಷಕನು ,
ಅಪಾಯದ ಕಾಲದಲ್ಲಿ ನೀನೆ ನನ್ನನು ಭದ್ರಪಡಿಸಿ ನಿತ್ಯವು ಕಾಪಾಡುವಾತನು
ನೀನೆ ನನ್ನ ಪಂಕ್ತಿಯು ನನ್ನ ಕೋಟೆಯು ಸಹಾಯಕನು ನನ್ನ ವಿಮೋಚಕನು ,
ನೀನೆ ನನ್ನ ದುರ್ಗವು ನನ್ನ ಬಲವು, ಕುರುಬನು ನೀನೆ ನನಗೆ ಆಧಾರಕನು
ನೀನೆ ನನ್ನ ಶರಣನು ಪ್ರಾಣಪ್ರೀಯನು ಭದ್ರವಾದ ಬುರುಜು ನನ್ ಉದ್ಧಾರಕನು,
ನೀತಿ ಸೂರ್ಯನು ನೀನು ನಂಬಿಗಸ್ತನೂ ನೀನೆ ಪರಿಪಾಲಕನು ನನ್ನ ಒಡೆಯನು
ನನ್ನ ಪಾಲು ......ನೀನೆ ಯೇಸುವೆ ಕೃಪ ಸಂಪೂರ್ಣನು ಜೀವದಾಯಕನೆ,
ನನ್ನ ದೇವರೆ ನೀನೆ ನನ್ನಾಶ್ರಯಗಿರಿಯು ನನ್ನ ಪ್ರಾಣದ ಆಧಾರವು ನನ್ನ ರಕ್ಷಕನು