ನನ್ನ ಪ್ರಿಯ ಯೇಸುವೇ ನೀನೇ ನನ್ನ ಪ್ರಾಣವೂ

ಕನ್ನಡ

ನನ್ನ ಪ್ರಿಯ ಯೇಸುವೇ ನೀನೇ ನನ್ನ ಪ್ರಾಣವೂ ಹಗಲಿರುಳು ನಿನ್ನ ಸನ್ನಿಧಿಯಲ್ಲಿರುವೆ || 1 ) ಅಪ್ಪಾ ತಂದೆ ಎಂದು ಕರೆಯುವಾ ಭಾಗ್ಯವ ನೀಡಿರುವೆ || ನಿನ್ನ ಮಗನೂ ನಾನು ಎಂದು ಪಾದದಲ್ಲೇ ಕಾದಿರುವೆ || ಲೋಕದಲ್ಲಿ ಸಾವಿರ ದಿನವು ಕಳೆಯಲು ನನಗಿದ್ದರು ನಿನ್ನ ಸನ್ನಿಧಿಯಲ್ಲಿರುವಾ ಒಂದು ದಿನವೇ ಶ್ರೇಷ್ಠವು || 2 ) ಕಷ್ಟ ನಷ್ಟ ಬಂದರು ನನ್ನ ಮುಂದೆ ನೀನಿರುವೇ ಕೆಡುಕನ ಕೇಡುಗಳಲ್ಲಿ ಕೃಪೆಗಾಗಿ ಬೇಡುವೆ || ಶಿಲುಬೆಯ ನೆರಳಿನಲ್ಲಿ ಆಶ್ರಯವ ಪಡೆಯುವೆನು ಪ್ರತಿ ದಿನವು ಪ್ರತಿ ಕ್ಷಣವು ನಿನ್ನನ್ನೇ ಸ್ತುತಿಸುವೆನು || 3 ) ಮಾಯೆಯಾದ ಲೋಕದ ಆಸೆ ಮುಟ್ಟದು ನನ್ನನ್ನೆಂದೂ ಸೆಳೆಯುವ ಪಾಪದ ಇಚ್ಛೆ ನನ್ನನ್ನು ಮುಳುಗಿಸದು || ವಾಕ್ಯವನ್ನು ಹೃದಯದಲ್ಲಿ ಬರೆದು ನಾ ಇಟ್ಟಿರುವೆ ಅದುವೆ ನನ್ನ ಬಾಳಿಗೆ ಬೆಳಕು ದಾರಿಗೆ ಧಿಪವು ||