ನನ್ನ ಪ್ರಾರ್ಥನೆ ಧೂಪದಂತೆ ನಿನ್ ಬಳಿ ಬರಬೇಕಯ್ಯ (೨),

ಕನ್ನಡ

ನನ್ನ ಪ್ರಾರ್ಥನೆ ಧೂಪದಂತೆ ನಿನ್ ಬಳಿ ಬರಬೇಕಯ್ಯ (೨), ಪ್ರಾರ್ಥನ ವೀರರು ದೇಶವೆಲ್ಲಾ ಏಳಬೇಕು (೨), ಮುರಿದ ಸಂಭಂಧ ಮತ್ತೆ ಕಟ್ಟಲ್ಪಡಬೇಕು (೨), ಕರ್ತನೆ ಬೇಡುವೆ, ಕರ್ತನೆ ಬೇಡುವೆ, ||ನನ್ನ ಪ್ರಾರ್ಥನೆ|| ಪರಲೋಕ ಅಗ್ನಿಯು ಎಲ್ಲೆಲ್ಲೂ ಉರಿಯಬೇಕು (೨), ಪಾಪದ ಕಾರ್ಯವೆಲ್ಲ ಸುಟ್ಟು ಹಾಕಲ್ಪಡಬೇಕು (೨), ಕರ್ತನೆ ಬೇಡುವೆ, ಕರ್ತನೆ ಬೇಡುವೆ, ||ನನ್ನ ಪ್ರಾರ್ಥನೆ|| ದೂರ ಹೋದ ಜನರೆಲ್ಲ ನಿನ್ನ ಬಳಿ ಬರಬೇಕು (೨), ಕರ್ತನೇ ದೇವರೆಂದು ಪಾದಕೆ ಬೀಳಬೇಕು (೨), ಕರ್ತನೆ ಬೇಡುವೆ, ಕರ್ತನೆ ಬೇಡುವೆ, ||ನನ್ನ ಪ್ರಾರ್ಥನೆ||