ನಿನ್ನ ಪ್ರೀತಿ ಎಷ್ಟೋ ಅಪಾರವೆ ವರ್ಣೀಸಲಸದಳವಾಗಿದೆ

ಕನ್ನಡ

ನಿನ್ನ ಪ್ರೀತಿ ಎಷ್ಟೋ ಅಪಾರವೆ ವರ್ಣೀಸಲಸದಳವಾಗಿದೆ ಅದರಂತರಾಳವನರಿಯಲು ಈ ಅಲ್ಪ ಬುದ್ದಿ ಸಾಲದು 1.ನನ್ನನ್ನು ನೀನು ಪ್ರೀತಿಸಿದ್ದು ಶಾಶ್ವತ ಪ್ರೇಮದಿ ಪ್ರೀತಿ ಕರುಣೆಯಿಂದಲೇ ನನ್ನನು ಸೆಳೆದಿ ನಿನ್ನನ್ನೆಷ್ಟು ಸ್ತುತಿಸಿದರೂ ಇನ್ನೂ ಸಾಲದು ಇನ್ನೂ ಸಾಲದು || ನಿನ್ನ || 2.ನೀ ನಿಲ್ಲದಿರುತ್ತಿದ್ದರೆ ನನಗಿಲ್ಲ ನಿರೀಕ್ಷೆಯು ಲೋಕವು ನನ್ನನ್ನೇಷ್ಟಾಗಿ ಹಗೆ ಮಾಡುತ್ತಿದ್ದರು ನಿನ್ನ ಪ್ರೀತಿ ಕೃಪೆಗಳೇ ನನ್ನಯ ಬಲವು ನನ್ನಯ ಬಲವು || ನಿನ್ನ || 3.ನಿನ್ನಲ್ಲಿ ನನಗೆ ಸಂತೃಪ್ತಿಯೂ ಹೃದಯಕೆ ನೆಮ್ಮದಿಯು ಸಂತೋಷ ಕಷ್ಟಗಳಲ್ಲಿಯೂ ನಿನ್ ಚಿತ್ತ ಮಾಡಲು ಕಲಿಸು ಪ್ರಾರ್ಥಿಸಿ ಕೊಂಡಾಡಲು ನಿನ್ನಯ ಪ್ರೀತಿಯಾ ನಿನ್ನಯ ಪ್ರೀತಿಯಾ || ನಿನ್ನ ||