ನಿನ್ನ ಪ್ರೀತಿಯಲ್ಲಿ ಲೀನನಾದೆ ನಾ

ಕನ್ನಡ

ನಿನ್ನ ಪ್ರೀತಿಯಲ್ಲಿ ಲೀನನಾದೆ ನಾ ನಿನ್ನ ಬಾಹುವನ್ನು ಆದುಕೊಂಡೆ ನಾ ಓ ಯೇಸುವೆ ನಿನ್ನ ಪ್ರೀತಿಗೆ ಬದಲೇನನ್ನು ನಾ ನೀಡಲಿ ನನ್ನ ಆತ್ಮವಾ ನನ್ನ ದೇಹವಾ ಸಮರ್ಪಿಸುತಾ ನಾ ಹಾಡುವೆ ನಿನ್ನ ಪ್ರೀತಿಯಲ್ಲಿ … 1.ಕೋಮಲವಾದ ಆ ಕರಗಳು ನನ್ನ ಪಾಪಕ್ಕೆ ಘೋರವಾಯಿತು ಆ ಕರಗಳೇ ಈ ಪಾಪಿಯಾ ಅಪ್ಪಿಕೊಳ್ಳಲು ಸಿದ್ದವಾಯಿತು ನಿನ್ನ ಪ್ರೀತಿಯಲ್ಲಿ … 2.ಸುಂದರವಾದ ಆ ಅಧರವು ನನ್ನ ದ್ರೋಹದಿ ಕುರೂಪವಾಯಿತು ಆ ಅಧರವೇ ಈ ದ್ರೋಹಿಯಾ ಚುಂಬಿಸುತ್ತಲೇ ಸ್ವೀಕರಿಸಿತು ನಿನ್ನ ಪ್ರೀತಿಯಲ್ಲಿ … 3.ಅತಿಶಯವಾದ ಆ ಪಾದವು ನನ್ನ ದೋಷಕ್ಕೆ ಗಾಯಗೊಂಡಿತು ಆ ಪಾದವೇ ಈ ದೋಷಿಗೇ ದಾರಿ ತೋರುವಾ ದೀಪವಾಯಿತು ನಿನ್ನ ಪ್ರೀತಿಯಲ್ಲಿ …