ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯಾ

ಕನ್ನಡ

ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯಾ ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨) 1.ರೋಗಗಳನ್ನು ವಾಸಿ ಮಾಡಿ ಹೊಸ ಜೀವನ ನನಗೆ ತಂದೆ ನನ್ನನ್ನು ನಾಶನದಿಂದ ತಪ್ಪಿಸಿದವರು ನೀವೇ ಸಮೃದ್ಧಿ ಜೀವನ ನನಗೆ ನೀಡಿರುವೆ-೨ ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨) 2.ಯೇಸುವೇ ನಿನ್ನ ರಕ್ತದಿಂದ ನನ್ನನ್ನು ಶುದ್ದಿ ಮಾಡಿದೆ ಪರಿಶುದ್ದ ಆತ್ಮನಿಂದ ನನ್ನನ್ನು ತುಂಬಿಸಿರುವೆ ನಮ್ಮಯ ಪಾಪಗಳ ಕ್ಷಮಿಸಿರುವೆ ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ ಸ್ತೋತ್ರ ಯೇಸಯ್ಯಾ-೨ ನಮನ ಯೇಸಯ್ಯಾ-೨ ಮಹಿಮೆ ಯೇಸಯ್ಯಾ- (೨) 3.ಶಾಶ್ವತ ಪೇಮದಿಂದ ನನ್ನನ್ನು ಪ್ರೀತಿಸಿರುವೆ ನನ್ನನ್ನು ಮಮತೆಯಿಂದ ಸೆಳೆದುಕೊಂಡೆ ಯೇಸಯ್ಯಾ ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ ಸ್ತೋತ್ರ ಯೇಸಯ್ಯಾ-೨ ನಮನ ಯೇಸಯ್ಯಾ-೨ ಮಹಿಮೆ ಯೇಸಯ್ಯಾ- (೨) ನಿನ್ನ ಪ್ರೀತಿಸಲು ಈ ಹೃದಯ ಸಾಲದು ಹೃದಯ ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ ಸ್ತೋತ್ರ ಯೇಸಯ್ಯಾ-೨ ಮಹಿಮೆ ಯೇಸಯ್ಯಾ-(೨)