ಕನ್ನಡ
ನಿನ್ನ ಮಡಿಲಲ್ಲಿ ನಾ ಮಲಗಿರ ಬೇಕು ಯೇಸು
ನಿನ್ನ ಎದೆಯಲ್ಲಿ ನಾ ಒರಗಿರಬೇಕು
ನಿನ್ನ ವಾಕ್ಯದಲ್ಲಿ ನಾ ಬದುಕಿರ ಬೇಕು ಯೇಸು
ನಿನ್ನ ಸನ್ನಿಧಿಯಲ್ಲಿ ನಾ ಬಾಳ ಬೇಕು
1.ನನ್ನನ್ನು ನಾ ಮರೆಯುತ
ನನ್ನನ್ನು ನಿನಗೆ ಅರ್ಪಿಸುತಾ
ಪೂರ್ಣ ಬಲದಿ ಪೂರ್ಣ ಹೃದಯದಿ
ಸಾದ ನಿನ್ನ..ಆಯ್ಯಾ ಆರಾಧಿಸುವೆ
2.ನಿನ್ನನ್ನೆ ನಾ ದೃಷ್ಠಿಸುತಾ
ನನ್ನ ಚಿಂತೆ ನಿನಗೆ ಅರ್ಪಿಸುತ
ಪೂರ್ಣ ಬಲದಿ ಪೂರ್ಣ ಹೃದಯದಿ
ಸಾದ ನಿನ್ನ…ಅಯ್ಯಾ ಆರಾಧಿಸುವೆ