ಕನ್ನಡ
ನಿನ್ನ ಮನೆಯ ಅಂಗಳಕ್ಕೆ ಬಂದಿಹೆವು ಇಂದು
ತಂದೆವು ಕಾಣಿಕೆಯು ಸ್ತೋತ್ರದ ಹು ಮಾಲೆಯ
1.ನಿನ್ನ ಕೈಗಳು ಕಟ್ಟಿದ ಈ ಅಲಯ ನಿನ್ನ ಪ್ರೇಮದ ಮುಖದ ಪ್ರತಿ ಬಿಂಬವು
ಪ್ರೀತಿಯ ಕಿರಣ ಹರಡುತಲಿ ನಿನ್ನ ಶಕ್ತಿಯ ಸಾರುವ ಮಂದಿರವ
ಕರ್ತನೆ ಪ್ರತಿಷ್ಟಿಸು, ನಿನ್ನಾಲಯ ತುಂಬಿಸು ನಿನ್ನಾ ನಾಮ
ಪ್ರಭಾವದಂದಲೇ
2.ಈ ಸ್ಥಳದಲ್ಲಿ ಬೇಡುವ ಪ್ರತಿಯೊಬ್ಬನ ಕಟಾಕ್ಷಿಸಿ ಹರಸಿ ಬಲಪಡಿಸಿ
ದೈವ ದರ್ಶನ ಬಯಸಿ ಬರುವವರ ಪರಲೋಕದ ದರ್ಶನ ದಯಪಾಲಿಸು
3ನಿನ್ನ ರಕ್ತವ ಸುರಿಸಿ ನೀ ಕಟ್ಟಿದ ಈ ದೇಹವೆಂಬ ದೇವರ ದೇವಾಲಯ
ಪರಿಶುದ್ಧತೆಯೆಂಬ ಪರಿಮಳವ ಬೀರುತ್ತ ಸಾರುತ್ತ ಕೊಂಡಾಡಲಿ