ನಿನ್ನ ಮೊರೆ ಹೋಗುವ ಭಕ್ತರೆಂದಿಗೂ

ಕನ್ನಡ

ನಿನ್ನ ಮೊರೆ ಹೋಗುವ ಭಕ್ತರೆಂದಿಗೂ ಭಾಗ್ಯವಂತರೂ ಭಾಗ್ಯವಂತರೂ ಎಂದೆಂದು ಭಾಗ್ಯವಂತರೂ ಹಲ್ಲೆಲೂಯ ಭಾಗ್ಯ ಹಲ್ಲೆಲೂಯ ಭಾಗ್ಯ || 1.ಕುಂದಿದ ಮನದಿಂದ ತಾಳ್ಮೆಯಿಂದ ಜೀವಿಸುವವರೆಂದು ಭಾಗ್ಯವಂತರೂ || ನಿನ್ನ || 2.ವೇದ ವಚನಗಳ ಕೈ ಗೊಂಡು ಭೋದಿಸುವವರೆಂದು ಭಾಗ್ಯವಂತರೂ || ನಿನ್ನ || 3.ದೇವಾನುಗ್ರಹದಿಂದ ಉತ್ತಮವಾಗಿ ನಡೆಯುವ ಮಕ್ಕಳು ಭಾಗ್ಯವಂತರೂ || ನಿನ್ನ || 4.ಕ್ರಿಸ್ತನ ಭಕ್ತರಾಗಿ ಗತಿಸುವ ಮಕ್ಕಳು ಇಂದು ಎಂದೆಂದೂ ಭಾಗ್ಯವಂತರೂ || ನಿನ್ನ ||