ನನ್ನ ಯೇಸುವೆ ಓ ನನ್ನ ಪ್ರಭುವೇ ಸ್ತುತಿಸಿ ನಾ ಕೊಂಡಾಡುವೆ

ಕನ್ನಡ

ನನ್ನ ಯೇಸುವೆ ಓ ನನ್ನ ಪ್ರಭುವೇ ಸ್ತುತಿಸಿ ನಾ ಕೊಂಡಾಡುವೆ ಕರುಣಿಸು ನನ್ನನು ನಿನ್ನಯ ಹಸ್ತದಿ (2) ಕೈಹಿಡಿದು ನಡೆಸೆನ್ನನು ನೀನ್ ಕೃಪೆಯು ನನಗಿರಲ್ಲಿ – ನನ್ನ ಯೇಸುವೆ 1.ಆಶ್ರಯ ದುರ್ಗನೇ ಮಹಿಮಾ ಪ್ರಭಾವನೇ ಬಲವಾದ ಬಂಡೆಯೇ ಆಶ್ರಯ ಗಿರಿಯೆ ರಾಜದಿ ರಾಜನೇ ಜೀವಾ ಸ್ವರೂಪನೇ ಇಮ್ಮಾನುವೇಲನೇ ನಿತ್ಯನಾದ ತಂದೆಯೇ ಬಾಳಿನ ಜ್ಯೋತಿಯು ನೀನಾಗಿ ಬಾ ತಂದೆ (2) ಕೈಹಿಡಿದು ನಡೆಸೆನ್ನನು ನೀನ್ ಕೃಪೆಯು ನನಗಿರಲ್ಲಿ – ನನ್ನ ಯೇಸುವೆ 2.ನೀನೇ ನನ್ನ ಬಂಡೆಯು ಕೋಟೆಯು ದರುಶನ ನೀಡಿ ದಾರಿಯ ತೋರಿಸು ನನ್ ಶರಣನೇ ವೀಮೊಚಕನೇ ನೀ (2) ಕೈಹಿಡಿದು ನಡೆಸೆನ್ನನು ನೀನ್ ಕೃಪೆಯು ನನಗಿರಲ್ಲಿ – ನನ್ನ ಯೇಸುವೆ