ನಿನ್ನ ಸನ್ನಿಧಿಯಲ್ಲಿ ಬೇಡುವೆನು

ಕನ್ನಡ

ನಿನ್ನ ಸನ್ನಿಧಿಯಲ್ಲಿ ಬೇಡುವೆನು ನಿನ್ನ ಸಮ್ಮುಖ ಬಯಸುವೆನು ದಾವಿದನ ಹಾಗೆ ಆರಾಧಿಸುವೆನು ದಾನಿಯೇಲನ ಹಾಗೆ ಪ್ರಾರ್ಥಿಸುವೆನು ಯೇಸುವೇ ಯೇಸುವೇ ಸ್ತೋತ್ರ ಸ್ತೋತ್ರ ಪ್ರಭುವೇ ಪ್ರಭುವೇ ಮಹಿಮೆ ನಿನಗೆ || 2 || || ನಿನ್ನ ಸನ್ನಿಧಿಯಲ್ಲಿ || ನೀನೇ ಬೆಳಕು ನನ್ನ ಬಾಳಿಗೆ ನೀನೇ ದೀಪವು ನನ್ನ ಸೇವೆಗೆ || 2 || ಮಹಿಮೆಯ ರಾಜನೇ ಪ್ರೀತಿಯ ಶಿಖರವೇ || 2 || || ನಿನ್ನ ಸನ್ನಿಧಿಯಲ್ಲಿ || ನೀನೇ ಸತ್ಯಮಾರ್ಗವು ಲೋಕಕ್ಕೆ ನೀನೇ ಉಸಿರು ನನ್ನ ಜೀವಕ್ಕೆ || 2 || ಅದ್ಭುತ ಸ್ವರೂಪನೇ ಆತ್ಮಿಯ ನಾಯಕನೇ || 2 || || ನಿನ್ನ ಸನ್ನಿಧಿಯಲ್ಲಿ || ನಿನ್ನ ನಂಬಿ ನಾನು ಬಾಳುವೆ ನಿನ್ನ ಆಲಯದಲ್ಲಿ ಬದುಕುವೇ || 2 || ಪರಿಶುದ್ಧ ಆತ್ಮನೇ ಪವಿತ್ರಾವಾದ ಆಗ್ನಿಯೇ || 2 || || ನಿನ್ನ ಸನ್ನಿಧಿಯಲ್ಲಿ ||