ನಿನ್ನ ಸ್ನೇಹ ಸಾನ್ನಿಧ್ಯದಿ

ಕನ್ನಡ

ನಿನ್ನ ಸ್ನೇಹ ಸಾನ್ನಿಧ್ಯದಿ ಎಲ್ಲ ಮೋಹವನ್ನು ಕಳಚಿ ನಿನ್ನ ಮುಖವನ್ನು ನಾ ಹುಡುಕುವೆ ಯೇಸು ಸುಂದರನೆ ನಿನ್ನನ್ನು ಕೊಂಡಾಡುವೆ ||2|| ಯೋಗ್ಯನು ನೀನೇ ನೀ ಮಾತ್ರವೇ ಯೋಗ್ಯನು ನೀ ಮಾತ್ರವೇ ||2|| ನಿನ್ನಯ ಎದೆಯಲ್ಲಿ ನನ್ನ ತಲೆಯನ್ನು ಒರಗಿಸಿ ನಿನ್ನ ಶಬ್ದವ ನಾ ಕೇಳುವೆ ಯೇಸು ಪ್ರಿಯತಮನೆ ನಿನ್ನಲ್ಲಿ ಮೈ ಮರೆಯುವೆ||2|| ಸ್ತುತಿಗೆ ಪಾತ್ರನು ನೀ ಮಾತ್ರವೇ ಪಾತ್ರನು ನೀ ಮಾತ್ರವೆ ||2|| ಎಲ್ಲ ನನ್ನ ನೋವನ್ನೆಲ್ಲ ಮರೆತು ನನ್ನ ಚಿಂತಯೆಲ್ಲ ತೊರೆದು ನಿನ್ನಲ್ಲಿ ನಲಿದಾಡುವೆ ಯೇಸು ಸ್ನೇಹಿತನೆ ನಿನ್ನನ್ನು ಆರಾಧಿಸುವೆ||2|| ಶುದ್ಧನು ನೀನೆ ನೀ ಮಾತ್ರವೇ ಪರಿಶುದ್ಧನು ನೀ ಮಾತ್ರವೇ||2||