ನಿನ್ನ ಸಾನಿಧ್ಯಕೆ ನನ್ನನ್ನು ಸೇರಿಸು,

ಕನ್ನಡ

ನಿನ್ನ ಸಾನಿಧ್ಯಕೆ ನನ್ನನ್ನು ಸೇರಿಸು, ನನ್ನ ಬಯಕೆಯ ಯೇಸುವೆ ತೀರಿಸು ಆ ರಮ್ಯವಾದ ಸ್ಥಳವೇ ನನ್ನ ಸುಭಾಗ್ಯವು, ನನ್ನ ಬಯಕೆಯು, ನನ್ನ ಬಯಕೆಯು ||ನಿನ್ನ ಸಾನಿಧ್ಯಕೆ|| 1. ಹಂಬಲಿಸುತ್ತ ಕುಂದಿತು ನನ್ನ ಆತ್ಮವು, ನಿನ್ನ ಬಳಿಗೆ ಬರಲು ಕೃಪೆಯ ತೋರಿಸು, ನಿನ್ನ ದರ್ಶನದಿಂದಲೇ ತೃಪ್ತಿ ಪಡಿಸು (೨) ||ನಿನ್ನ ಸಾನಿಧ್ಯಕೆ|| 2. ನೀನು ಕಾಣದಿರಲು ಕಳೆಗುಂದುವೆನು, ನಿನ್ನ ಬೆಳಕ ನನ್ನಲಿ ಬೆಳಗ ಮಾಡಿಸು, ದೇವರೇ ನಿನ್ನ ಬಿಟ್ಟರೆ, ಬಾಡಿ ಹೋಗ್ವೆನು (೨) ||ಆ ರಮ್ಯವಾದ|