ನನ್ನದೊಂದು ಆಸೆ ಅದು ಒಂದೇ ಒಂದು ಆಸೆ

ಕನ್ನಡ

ನನ್ನದೊಂದು ಆಸೆ ಅದು ಒಂದೇ ಒಂದು ಆಸೆ ನನ್ನ ಉಸಿರಿರುವ ದಿನವೆಲ್ಲಾ ಶುಭವಾರ್ತೆ ಸಾರುವದೇ ಅದು ಒಂದೇ ಒಂದು ಆಸೆ ಅದು ಒಂದೇ ಒಂದು ಆಸೆ 1.ಅನ್ನವಿಲ್ಲದಿದ್ದರೂ ವಸ್ತ್ರವಿಲ್ಲದಿದ್ದರೂ ನಾ ಸಾರುವೇ ಶುಭವಾರ್ತೆಯ ಯಾರೇ ನನ್ನ ನಿಂದಿಸಲಿ ಯಾರೇ ಹಗೆ ಮಾಡಲಿ ನಾ ಸಾರುವೆ ಶುಭವಾರ್ತೆಯ ಕಷ್ಟವೋ ಸಂಕಟವೋ ನಿನ್ನಲ್ಲಿಯೇ ನನಗೆ ತೃಪ್ತಿ 2.ಪರಿಶುದ್ದ ಆತ್ಮನಿಂದ ಅಗ್ನಿಯ ಆತ್ಮನಿಂದ ನನ್ನನ್ನು ತುಂಬಿಸು ದೇವ ಶುಭವಾರ್ತೆ ನಾ ಸಾರಲು ಜ್ಞಾನದ ಆತ್ಮನಿಂದ ವಾಕ್ಯದ ರಹಸ್ಯವನ್ನು ದಿನ ನಿನ್ನ ಪ್ರಕಟಪಡಿಸಯ್ಯ ಶುಭವಾರ್ತೆ ನಾ ಸಾರಲು ಆತ್ಮನೇ ದೇವರ ಆತ್ಮನೇ ಅನುದಿನವು ನನ್ನ ನಡೆಸಯ್ಯ 3.ನನ್ನ ಭಾರತ ದೇಶಕ್ಕಾಗಿ ಕಣ್ಣೀರಿ ಸುರಿಸುತ ದಿನವೆಲ್ಲಾ ಪ್ರಾರ್ಥಿಸಿ ಬೇಡುವೆ ನಾ ದಿನವೆಲ್ಲಾ ಆನಂದದ ಮಳೆಯಾಗಿ ಅಭಿಷೇಕದ ಮಳೆಯಾಗಿ ನನ್ನ ದೇಶದ ಮೇಲೆ ಹರಿದು ಬಾ ಬಂಡೆಯೇ ನನ್ನ ಕೋಟೆಯೇ ನನ್ನ ದೇಶದ ವಿಮೋಚಕನೇ