ನನ್ನವರು ನನ್ನ ಮೇಲೆ ಹಗೆತಾನ ಮಾಡಿದರು

ಕನ್ನಡ

ನನ್ನವರು ನನ್ನ ಮೇಲೆ ಹಗೆತಾನ ಮಾಡಿದರು ನಾ ಪಡುವ ಕಷ್ಟಕಾಲದಲ್ಲಿ ಸಂತೋಷ ಪಟ್ಟರು ನನ್ನ ಬಲವಾದ ಬುರುಜು ನೀನು ನನ್ನ ಭದ್ರವಾದ ಕೋಟೆ ನೀನು || 2 || ಗರ್ವಿಷ್ಠರು ನನಗೆ ವಿರೋಧವಾಗಿ ನಿಂತಿದ್ದಾರೆ ಬಲತ್ಕಾರಿಗಳು ಬಲೆಯನ್ನು ಬೀಸಿದ್ದಾರೆ || 2 || ವಂಚಕರ ಕೈಯಿಂದ ನನ್ನ ಬಿಡಿಸಯ್ಯಾ ನನ್ನ ದೇವರು ನೀನಲ್ಲವೋ || 2 || || ನನ್ನವರು || ಯಾವ ಕೇಡು ನನಗೆ ಸಂಭವಿಸಬಾರದು ಉಪದ್ರವ ನನ್ನ ಸಮೀಪಕ್ಕೂ ಬಾರದು || 2 || ನೀನಿರುವಾಗ ನನಗೆ ಭಯವೇತಕೆ ಕೃಪೆಯನ್ನು ನೀಡಿ ಅಪ್ಪಿಕೋ || 2 || || ನನ್ನವರು || ಇರುಳಲ್ಲಿ ಭಯಹುಟ್ಟುವ ಯಾವುದಕ್ಕೂ ಅಂಜೆನು ಹಗಲಲ್ಲಿ ಹಾರಿ ಬರುವ ಬಾಣಕ್ಕೂ ಹೆದರೆನು || 2 || ಬಂಡೆಯ ಬಿರುಕಲ್ಲಿ ಮರೆಮಾಡಿಕೋ ಜೀವಲೋಕದಲ್ಲಿ ನೀನೇ ಸಾಕು || 2 || || ನನ್ನವರು ||