ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು

ಕನ್ನಡ

ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು ಪ್ರಭು… //2// ನನ್ ಪ್ರೀಯನೇ ಹಿತ ಚಿಂತಕನೇ, ನನ್ ಪ್ರಾಣನಾಥನೇ, ನನ್ನ ರಕ್ಷಕ… //2// ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು ಪ್ರಭು… 1.ತಂದೆ ಮಾತು ಮೀರಿ ಮನೆ ಬಿಟ್ಟು ಹೋದೆನು, ತಪ್ಪೀ ಹೋಗಿ ನಾನು ಊರ ಸುತ್ತಿ ಅಲೆದನು, ಸ್ನೇಹಿತರೆಲ್ಲರೂ, ನನ್ನ ತೊರೆದು ಹೋದರೂ, ಹಸಿವೆಯಿಂದ ನಾನು ಬಳಲಿ ದಿನಾ ಸಾಯುತ್ತಿರುವೆನು. ಒಂದು ಮಾತು ಸಾಕು, ಒಂದೇ ಮಾತು ಸಾಕು, ನಿನ್ನ ಮಾತು ಸಾಕು, ನನ್ನ ಯೇಸಯ್ಯ… //2// ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು ಪ್ರಭು… 2.ಯುದ್ಧ ಕಾಲದಲ್ಲಿ ಮನೆ ಮೇಲೆ ನಿಂತೂ, ನೋಡಬಾರದ ದೃಶ್ಯವ ಕಣ್ಣಾರೇ ನೋಡಿದೆ, ಬುದ್ದಿಹೀನನಾಗಿ ಅಂಕೆಮೀರಿ ಹೋದೆನು, ನಿನ್ನ ದೃಷ್ಟಿಯಲ್ಲಿ ನಾ ಘೋರ ಪಾಪ ಮಾಡಿದೆ. ಒಂದು ಮಾತು ಸಾಕು, ಒಂದೇ ಮಾತು ಸಾಕು, ನಿನ್ನ ಮಾತು ಸಾಕು, ನನ್ನ ಯೇಸಯ್ಯ… //2// 3.ಹೇಳದಿದ್ದ ವಿಷಯವ ಹೇಳಿ ಮೂಢನಾದೆನು. ನಿನ್ನ ಆತ್ಮ ಬಿಟ್ಟಾಗ ಬವ ಕಳೆದುಕೊಂಡೆನು. ಕುರುಡನಾಗಿ ನಾನು ಕಾಣ ಸುತ್ತುತ್ತಿರುವೆನು. ದಿಕ್ಕು ಇಲ್ಲದೇ, ನಾನು ನಿನ್ನ ದಯವ ಕೋರಿದೆನು. ಒಂದು ಮಾತು ಸಾಕು, ಒಂದೇ ಮಾತು ಸಾಕು, ನಿನ್ನ ಮಾತು ಸಾಕು, ನನ್ನ ಯೇಸಯ್ಯ… //2// ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು ಪ್ರಭು… //2// ನನ್ ಪ್ರೀಯನೇ ಹಿತ ಚಿಂತಕನೇ, ನನ್ ಪ್ರಾಣನಾಥನೇ, ನನ್ನ ರಕ್ಷಕ… //2// ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು ಪ್ರಭು…