ನಮಗಾಗಿ ಅಲ್ಲ ಕರ್ತನೆ ನಮಗಾಗಿ ಅಲ್ಲ ||

ಕನ್ನಡ

ನಮಗಾಗಿ ಅಲ್ಲ ಕರ್ತನೆ ನಮಗಾಗಿ ಅಲ್ಲ || ನಿನ್ನ ಕೃಪೆಗೆ ನಿನ್ನ ಮಹಿಮೆಗೆ ನಿನ್ನ ನಾಮಕ್ಕೆ ಮಹಿಮೆ || 1.ದೇವರೆ ನೀನು ಪರಲೋಕದಲ್ಲಿ ವಾಸಮಾಡುವೆ || ನಿನ್ನ ಸಭೆಗಳಿಗಾಗಿ ಲೋಕದಲ್ಲಿ ಇಳಿದು ಬರುವಾತನೆ || 2.ಜೀವಿಸದ ದೇವರನ್ನು ಸೃಷ್ಠಿಸಿ ಪೂಜಿಸುವಾ ಜನರು ನಾಚಿಕೆ ಹೊಂದುವರು || ಯೇಸು ಎಂದೆಂದಿಗೂ ಜೀವಿಸುವಾ ದೇವರು ಆಳ್ವಿಕೆ ನಡೆಸುವೆ ನೀ || 3.ನಿನ್ನ ದಾಸರನ್ನು ಉನ್ನತದಲ್ಲಿಡುವೆ ನಿನಗೆ ಘನ ಮಹಿಮೆ || ನಿನ್ನ ವಾಕ್ಯಕ್ಕೆ ಭಯಪಡುವವರು ಭಾಗ್ಯವಂತರಾಗುವರು ||