ಕನ್ನಡ
ನಿಮ್ಮ ದುಃಖವು ಸಂತೋಷವಾಗುವುದು,
ನಿಮ್ಮ ಕಳವಳ ಕಣ್ಣೀರು ಎಲ್ಲಾ ಮರೆಯಾಗ್ವದು (೨),
ಕಳವಳವೇ ಬೇಡ (೨) ನಮ್ಮ ಯೇಸು ಕೈ ಬಿಡಲಾರ (೨) ||ನಿಮ್ಮ ದುಃಖವು||
1. ನಡೆದದನ್ನು ನೆನಸಿ ಕೊರಗದಿರು, ಹಳೆದನ್ನು ಮರೆತುಬಿಡು (೨),
ಕರ್ತನು ಹೊಸದನ್ನು ಮಾಡುವನು, ಇಂದೇ ನೀ ಕಾಣುವೆ (೨),
2. ಅಗ್ನಿಯ ಮೇಲೆ ನಡೆದರೂ, ದಹಿಸಿ ಹೋಗಲಾರೆ (೨),
ನದಿಗಳನ್ನು ನೀ ದಾಟಿದರೂ, ಮುಳುಗಿ ಹೋಗಲಾರೆ (೨) ||ಕಳವಳವೇ||
3. ಶಕ್ತಿಗೆ ಮೀರಿದ ಶೋಧನೆಯ ನಿನಗೆಂದೂ ನೀಡನು (೨),
ಸಹಿಸಲು ನಿನಗೆ ಬಲ ಕೊಡುವ, ತಪ್ಪಲು ದಾರಿ ತೋರುವ (೨) ||ಕಳವಳವೇ||
ಕೊರಗದಿರು ಮಗನೆ, ಕೊರಗದಿರು ಮಗಳೆ (೨),