ನರಕಕ್ಕೆ ಹೋಗಲು ನವ ದ್ವಾರ ಮಾನವ

ಕನ್ನಡ

ನರಕಕ್ಕೆ ಹೋಗಲು ನವ ದ್ವಾರ ಮಾನವ ಅಲ್ಲಿಗೆ ಹೋಗಲು ನೀ ಏನನ್ನು ಮಾಡಬೇಕಿಲ್ಲಾ ಇವರೆಗೂ ಮಾಡಿದ ಪಾಪದ ಕಾರ್ಯ ನಡೆಸುವದು ಬಹುದೂರ ಅದು ನಿತ್ಯವಾದ ಮರಣ ಸ್ವರ್ಗಕ್ಕೆ ಹೋಗಲು ಹುಡುಕು ಪರಿಹಾರ ಯೇಸುವೇ ಒಂದೇ ಮಾರ್ಗ 1.ಮಾನವನೇ ನೀ ಪಾಪವ ಮಾಡಿ ಅರ್ಪಿಸುತ್ತಿ ಪ್ರಾಣಿಯಾ ಬಲಿ ನೀ ಮಾಡಿರುವಾ ಪಾಪಕ್ಕಾಗಿ ಯಜ್ಞಹೋಮವಾ ಸುಡುತ್ತಿರುತ್ತಿ ನನ್ನಲ್ಲಿ ಇರುವ ಪಾಪ ದ್ವೇಷದ ಆತ್ಮ ಸುಡಲ್ಪಡಲಿಲ್ಲಾ ಸಿಗಲಿಲ್ಲ ಆತ್ಮಕ್ಕೆ ಮೋಕ್ಷ || 2.ಪಾಪ ಪರಿಹಾರ ಹೊಂದಲು ನೀ ನದಿಗಳಲ್ಲಿ ಸ್ನಾನ ಮಾಡುತ್ತೀ ನೀರಲ್ಲಿ ತೊಳೆಯಲು ನಿನ್ನ ಪಾಪವು ದೇಹಕ್ಕೆ ಹತ್ತಿದ ಕೊಳೆಯಲ್ಲ ಹಾಗಲಕಾಯಿ ನೀರಲ್ಲಿ ಮುಳುಗಿಸಿದರು ಹೋಗಲ್ಲಾ ಕಹೀ ಸ್ವಭಾವ ಅದರಂತೆ ನಿನ್ನ ಜೀವಿತ || 3.ಪಾಪ ಪರಿಹಾರ ಹೊಂದಲು ನಾವು ವೇಧಶಾಸ್ತ್ರವು ಹೇಳುವುದೇನು ರಕ್ತಧಾರೆಯು ಇಲ್ಲದೆ ನಮಗೆ ಸಿಗುವುದಿಲ್ಲಾ ಪಾಪ ಪರಿಹಾರ ಅದಕ್ಕಾಗಿಯೇ ಶಿಲುಬೆಯಲ್ಲಿ ಯೇಸುಕ್ರಿಸ್ತನೊಬ್ಬನೆ ಸುರಿಸಿದ ತನ್ನ ರಕ್ತ ಕೊಡಲು ನಮಗೆ ಮೋಕ್ಷ ||