ನಿವಾಸವಾಗಿ ಆರಿಸಿಕೊಂಡೆ ಸಂಚರಿಸುವೆ ಆಂತರ್ಯದಿ

ಕನ್ನಡ

ನಿವಾಸವಾಗಿ ಆರಿಸಿಕೊಂಡೆ ಸಂಚರಿಸುವೆ ಆಂತರ್ಯದಿ ಮಗನಾಗಿ ಮಾಡಿಕೊಂಡೆ ಮಾತಾಡುವೆ ಹೃದಯದಲ್ಲಿ || ಅಪ್ಪಾ ತಂದೆಯೇ ನಿನ್ನನ್ನೇ ಹೋಗಳುವೆ ಮೇಲೆತ್ತಿ ಹಾಡುವೆ ಜೀವಂತ ದಿನವೆಲ್ಲಾ || 1.ನೀತಿಗು ಅನೀತಿಗು ಸಂಬಂಧ ಎಲ್ಲಿ ಬೆಳಕಿಗೂ ಇರುಳಿಗೂ ಐಕ್ಯ ಎಲ್ಲಿ ಬಿಟ್ಟು ಬಿಟ್ಟೆ ತ್ಯಜಿಸಿಬಿಟ್ಟೆ ಅಶುದ್ದವನ್ನು ಮುಟ್ಟಲಾರೆ 2.ಲೋಕ ಮಾರ್ಗದಲ್ಲಿ ಪಾಲು ನನಗಿಲ್ಲ ಸೈತಾನ ಕಾರ್ಯದಲ್ಲಿ ಒಡನಾಟ ನನಗಿಲ್ಲ || ಬಿಟ್ಟು ಬಿಟ್ಟೆ|| || ಅಪ್ಪಾ ತಂದೆಯೇ || 3.ಪರಿಶುದ್ಧ ಮಾಡಿದೆ ಪ್ರಾಣ ಆತ್ಮವ ದೈವ ಭಯದಿಂದ ಪೂರ್ಣಗೋಳಿಸುವೆ || ಬಿಟ್ಟು ಬಿಟ್ಟೆ|| || ಅಪ್ಪಾ ತಂದೆಯೇ ||