ನಾ ನಿನ್ ಹಸ್ತದಿ ಜೇಡಿಮಣ್ಣು – ಯೇಸಯ್ಯಾ

ಕನ್ನಡ

ನಾ ನಿನ್ ಹಸ್ತದಿ ಜೇಡಿಮಣ್ಣು – ಯೇಸಯ್ಯಾ ಕುಂಬಾರ ನೀನೇ ರೂಪಿಸಯ್ಯಾ ದಾಹದಿ ಬೇಡುವೆನು ನಿನ್ನನ್ನೇ ನಾ ಹುಡುಕುವೆನು ||2|| ನಿನ್ ಆತ್ಮದಿಂದ ತುಂಬಿಸು – ಅಯ್ಯಾ ನನ್ ಪಾತ್ರೆಯು ತುಂಬಿ ಹೊರಸೂಸ ||2|| 2.ನಿನ್ನ ನೀತಿ ವಿಧಿಗಳನ್ನು ನಾ ನೆನೆಸಿ ಕೊಂಡಾಡಲು ಮಧ್ಯರಾತ್ರಿಯಲ್ಲಿ ಏಳುವೇ – ಅಯ್ಯಾ ನಿನ್ ಪಾದದಲ್ಲೇ ನಾ ಕುಳಿತಿರುವೆ ||2|| 3.ನಿನ್ ಮಾರ್ಗವ ಉಪದೇಶಿಸು ನಾ ಕೊನೆವರೆಗೂ ನಡೆಯುವೆನು ನಿನ್ ಜ್ಞಾನದಿಂದ ತುಂಬಿಸು – ಅಯ್ಯಾ ನಿನ್ ವಾಕ್ಯದ ರಹಸ್ಯವ ತಿಳಿದುಕೊಳ್ವೆ ||2||