ಕನ್ನಡ
ನಾ ಸ್ತುತಿಸುವೆನು ನಾನು ಭಜಿಸುವೆನು ಕರ್ತನ ನಾಮಕ್ಕೆ ಮಹಿಮೆಯನು
ಸಲ್ಲಿಸಿ ಎಂದೂ ನಮಿಸುವೆನೂ ಸ್ತೋತ್ರಕೆ ಆತನೆ ಯೋಗ್ಯನು
ಆತನ ಕೃಪೆ ಪ್ರೀತಿ ಕರುಣೆಗಳ ವರ್ಣಿಸಲೆಂದಿಗೂ ಅಸಾಧ್ಯವು
ಪಾಪಿ ಯಾದೆನ್ನನ್ನು ರಕ್ಷಿಸಲೆಂದು ತೋರಿದ ಪ್ರೇಮವು ಅಪಾರವು
ಕರ್ತನ ನಂಬಿದ ದಿನದಿಂದಲೂ ಮಾಡಿದ ಉಪಕಾರಗಳೆಲ್ಲೆವನು
ಯೋಚಿಸಲೆನ್ನಯ ಹೃದಯವೆಲ್ಲ ಕೃತಜ್ಞಯಿಂದ ತುಂಬುವುದು
ಆತನಿರುವನ್ನೆ ನಾಸೇರಲು ಕಾತುರದಿಂದಲೆ ಕಾದಿಹೆನು
ಕರ್ತನ ನಾಮಕ್ಕೆ ಜಯಜಯವೆಂದು ಆರ್ಭಟಿಸಿ ನಾವು ಹಾಡುವೆವು